ಅಪ್ರಾಪ್ತ ಪ್ರಿಯತಮೆ ಮೇಲೆ ಅತ್ಯಾಚಾರವೆಸಗಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ಪಾಪಿ..!
ಗದಗ: ಅಪ್ರಾಪ್ತೆ ಮೇಲೆ ಆಕೆ ಪ್ರಿಯತಮನೇ ಅತ್ಯಾಚಾರವೆಸಗಿ ಅತ್ಯಂತ ಕ್ರೂರವಾಗಿ ಚಿತ್ರಹಿಂಸೆ ನೀಡಿ ಆಸಿಡ್ ಸುರಿದು ಕೊಲೆ ಮಾಡಿರುವ ಘಟನೆ ಗದಗದ ಬೆಳಗಾವಿ ಜಿಲ್ಲೆಯ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗದಗದ ನರಗುಂದದಿಂದ ಬಾಲಕಿಯನ್ನ ಅಪಹರಿಸಿ ರಾಮದುರ್ಗಕ್ಕೆ ಎಳೆದೊಯ್ದ ಕಾಮುಕ ಅಲ್ಲಿ ಆಕೆಯ ಮೇಲೆ ಮೊದಲಿಗೆ ಅತ್ಯಾಚಾರವೆಸಗಿ ಬಳಿಕ ಕತ್ತು ಹಿಸುಕಿ, ಮುಖಕ್ಕೆ ಆಸಿಡ್ ಹಾಕಿ ಕೊಲೆ ಮಾಡಿದ್ದಾನೆ. ಸದ್ಯ ಗದಗ ಪೊಲೀಸರು ಆತನನ್ನ ಅರೆಸ್ಟ್ ಮಾಡಿ ರಾಮದುರ್ಗ ಪೊಲೀಸರ ವಶಕ್ಕೆ ಒಪ್ಪಿಸಿದ್ಧಾರೆ.
ಪ್ರಕರಣದ ಹಿನ್ನೆಲೆ
ಆರೋಪಿಯು ಧಾರವಾಡದವನಾಗಿದ್ದು, 23 ವರ್ಷದ ಸದ್ದಾಮ್ ಎಂದು ಗುರುತಿಸಲಾಗಿದೆ. ಈತ ಆಗಾಗಾ ಗದಗದ ನರಗುಂದಕ್ಕೆ ಸಂಬಂಧಿಕರ ಮನೆಗೆ ಬರುತ್ತಿದ್ದ. ಅಲ್ಲಿ ಅಪ್ರಾಪ್ತ ಹುಡುಗಿಯ ಪರಿಚಯವಾಗಿದೆ. ಇಬ್ಬರ ನಡುವೆ ಪರಸ್ಪರ ಪ್ರೀತಿ ಹುಟ್ಟಿದೆ. ಹೀಗೆ ಇಬ್ಬರೂ 2 ವರ್ಷಗಳ ಕಾಲ ಲವ್ ಮಾಡಿದ್ದಾರೆ.
ಆದ್ರೆ ಹುಡುಗಿಗೆ ಬೇರೆ ಹುಡುಗರ ಜೊತೆಗೆ ಸಂಪರ್ಕ ಇತ್ತು ಎಂಬ ಅನುಮಾನದ ಮೇಲೆ ಆರೋಪಿ ಇಂತಹ ನೀಚ ಕೃತ್ಯವೆಸಗಿದ್ದಾನೆ. ಆಕೆಯನ್ನ ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ.
ಮಾರ್ಚ್ 20ರಂದು ಬಾಲಕಿ ನಾಪತ್ತೆಯಾಗಿದ್ದು, ಮಾ.23 ರಂದು ಪಾಲಕರು ನರಗುಂದ ಪೊಲೀಸ್ ಠಾಣೆಯಲ್ಲಿ ಬಾಲಕಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಕಳೆದ 2 ದಿನಗಳ ಹಿಂದೆ ಬಾಲಕಿ ಕೊಳೆತ ಸ್ಥಿತಿಯ ಶವ ಪತ್ತೆಯಾಗಿದೆ.
ಬಳಿಕ ಪೊಲೀಸರು ಬಾಲಕಿಯ ಮೊಬೈಲ್ ಟ್ರ್ಯಾಪ್ ಮಾಡಿ ತನಿಖೆ ನಡೆಸಿದಾಗ ಆಕೆಯ ಪ್ರಿಯಕರ ಸದ್ದಾಮ್ ಬಗ್ಗೆ ಗೊತ್ತಾಗಿದೆ. ಆರೋಪಿಯನ್ನು ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಅತ್ಯ ಬಾಯ್ಬಿಟ್ಟಿದ್ದಾನೆ. ಬಳಿಕ ಗದಗ ಪೊಲೀಸರು ಆತನನ್ನ ರಾಮದುರ್ಗ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.