ADVERTISEMENT
Friday, August 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

ಅಪ್ಪನ ಕನಸು ನನಸು ಮಾಡಿದ ರಿಷಬ್ ಪಂತ್.. ಆದ್ರೆ ಅದನ್ನು ಸಂಭ್ರಮಿಸುವ ಕ್ಷಣ ಬಂದಾಗ ಅಪ್ಪನೇ ಜೊತೆಗಿಲ್ಲ..!

admin by admin
March 31, 2021
in IPL 2021, Newsbeat, ಐಪಿಎಲ್ 2021
rishab pant delhi capitals
Share on FacebookShare on TwitterShare on WhatsappShare on Telegram

ಅಪ್ಪನ ಕನಸು ನನಸು ಮಾಡಿದ ರಿಷಬ್ ಪಂತ್.. ಆದ್ರೆ ಅದನ್ನು ಸಂಭ್ರಮಿಸುವ ಕ್ಷಣ ಬಂದಾಗ ಅಪ್ಪನೇ ಜೊತೆಗಿಲ್ಲ..!

Life in Gurudwara to IPL success, Rishabh Pant’s story of big sacrifices

Related posts

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

August 7, 2026
indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

August 7, 2026

rishab pant saakshatv team india ipl dcಅಪ್ಪನ ಕನಸು ನನಸು ಆದಾಗ ಅದನ್ನು ನೋಡುವ ಭಾಗ್ಯ ಅಪ್ಪನಿಗಿಲ್ಲ. ಮಗ ಕ್ರಿಕೆಟಿಗನಾಗಬೇಕು ಅನ್ನೋ ಆಸೆಯನ್ನು ಮಗ ಈಡೇರಿಸಿದಾಗ ಅದನ್ನು ನೋಡುವ ಅವಕಾಶವನ್ನು ಆ ವಿಧಿ ನೀಡಲಿಲ್ಲ. ಮಗ ಟೀಮ್ ಇಂಡಿಯಾದ ಸೈಡರ್ ಮ್ಯಾನ್ ಆಗಿ ಹೊರಹೊಮ್ಮುತ್ತಿದ್ದಾಗ ಅದನ್ನು ನೋಡಿ ಸಂತಸಪಡುವ ಯೋಗ ಅಪ್ಪನಿಗಿರಲಿಲ್ಲ. ಇದೀಗ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿ ಮಗನನ್ನು ತಬ್ಬಿಕೊಂಡು ಆನಂದಿಸುವ ಕ್ಷಣವನ್ನೂ ಆ ದೇವರು ನೀಡಲಿಲ್ಲ.
ಇದು ಟೀಮ್ ಇಂಡಿಯಾದ ಸೂಪರ್ ಮ್ಯಾನ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಅವರ ಬದುಕಿನ ನೋವಿನ ಕಥೆ.
ಉತ್ತರಖಂಡ್ ನ ರೂರ್ಕಿ ಅನ್ನೋ ಗ್ರಾಮೀಣ ಪ್ರದೇಶದ ಹುಡುಗ. ಸುಮಾರು ಹತ್ತು ಹನ್ನೊಂದು ವರ್ಷಗಳ ಹಿಂದೆ. ರಿಷಬ್ ಪಂತ್ ತಂದೆ ರಾಜೇಂದ್ರ ಪಂತ್‍ಗೆ ಮಗನನ್ನು ಕ್ರಿಕೆಟ್ ಆಟಗಾರನಾಗಿಸಬೇಕು ಎಂಬ ಆಸೆ. ಹಾಗಾಗಿ ಉತ್ತರಖಂಡ್ ನಿಂದ ದೆಹಲಿಗೆ ಮಗನನ್ನು ಕರೆದುಕೊಂಡು ಬಂದಾಗ ಸಿಕ್ಕ ಅಕಾಡೆಮಿಯೇ ಸೊನ್ನೆಟ್ ಕ್ರಿಕೆಟ್ ಅಕಾಡೆಮಿ.
ಸೊನ್ನೆಟ್ ಕ್ರಿಕೆಟ್ ಅಕಾಡೆಮಿಯಲ್ಲಿ 45 ದಿನಗಳ ಕ್ರಿಕೆಟ್ ಶಿಬಿರ ನಡೆಯುತ್ತಿತ್ತು. ಈ ಕ್ರಿಕೆಟ್ ಶಿಬಿರಕ್ಕೆ ರಿಷಬ್ ಪಂತ್ ಕೂಡ ಸೇರಿಕೊಂಡ್ರು. ದೆಹಲಿಯಲ್ಲಿ ಮೂರು ಮಂದಿ ಜೀವನ ಸಾಗಿಸೋದು ತುಂಬಾನೇ ಕಷ್ಟವಾಗುತ್ತಿತ್ತು. ಹೀಗಾಗಿ ರಿಷಬ್ ತಾಯಿ ದೆಹಲಿಯಲ್ಲೇ ಉಳಿದುಕೊಂಡ್ರು. ದೆಹಲಿಯ ಮೋತಿಭಾಗ್ ನ ಗುರುದ್ವಾರದಲ್ಲಿ ಕೆಲಸ ಮಾಡಿಕೊಂಡು ಮಗನ ಕ್ರಿಕೆಟ್ ಆಟಕ್ಕೆ ಪ್ರೇರಣೆ ನೀಡಿದ್ರು.
12 ವಯೋಮಿತಿಯ ಟೂರ್ನಿಯಲ್ಲಿ ಮೂರು ಶತಕಗಳನ್ನು ಸಿಡಿಸಿ ಗಮನ ಸೆಳೆದ ರಿಷಬ್ ಪಂತ್ ಗೆ ಗಾಡ್ ಫಾದರ್ ಆಗಿ ಸಿಕ್ಕಿದ್ದು ಸೊನ್ನೆಟ್ ಕ್ರಿಕೆಟ್ ಅಕಾಡೆಮಿಯ ಹೆಡ್ ಕೋಚ್ ತಾರಕ್ ಸಿನ್ಹಾ. ಜೊತೆಗೆ ಕೋಚ್ ದೇವೇಂದ್ರ ಶರ್ಮಾ.
ರಿಷಬ್ ಪಂತ್ ಅವರ ಪ್ರತಿಭೆಯನ್ನು ಗುರುತಿಸಿದ್ದು ತಾರಕ್ ಮತ್ತು ದೇವೇಂದ್ರ ಶರ್ಮಾ. ಅಲ್ಲದೆ ದೆಹಲಿಯ ಏರ್ ಫೋರ್ಸ್ ಸ್ಕೂಲ್ ಗೂ ಸೇರಿಸಿದ್ರು. ನಂತರ ರಿಷಬ್ ಪಂತ್ ಹಿಂತಿರುಗಿ ನೋಡಲೇ ಇಲ್ಲ. 19 ವಯೋಮಿತಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಪಂತ್ ಬಳಿಕ ದೆಹಲಿ ರಣಜಿ ತಂಡ, ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಈಗ ಟೀಮ್ ಇಂಡಿಯಾದಲ್ಲಿ ರಾರಾಜಿಸುತ್ತಿದ್ದಾರೆ.
ಆದ್ರೆ ಪಂತ್ ಅವರು ಈ ಖುಷಿಯನ್ನು ಹಂಚಿಕೊಳ್ಳಲು ಅವರ ಜೊತೆ ಅವರ ಅಪ್ಪ ರಾಜೇಂದ್ರ ಪಂತ್ ಈಗಿಲ್ಲ. 2017ರ ಐಪಿಎಲ್ ಟೂರ್ನಿಯ ವೇಳೆ ರಾಜೇಂದ್ರ ಪಂತ್ ನಿಧನರಾಗಿದ್ದರು. ನಿಧನದ ಸುದ್ದಿ ತಿಳಿದಾಗ ಪಂತ್ ಬೆಂಗಳೂರಿನಲ್ಲಿದ್ದರು. ಆರ್ ಸಿಬಿ ತಂಡದ ವಿರುದ್ಧ ಆಡಲು ತಯಾರು ನಡೆಸುತ್ತಿದ್ದರು.
rishab pant delhi capitals saakshatv ipl 2020ಆಗ 19ರ ಹರೆಯದ ಪಂತ್ ಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದೇ ತಿಳಿಯಲಿಲ್ಲ. ಒಬ್ಬನೇ ಮಗ. ಅಪ್ಪನ ಅಂತ್ಯ ಕ್ರಿಯೆ ಮಾಡಬೇಕು. ಪಂದ್ಯದಿಂದ ಹೊರನಡೆಯಬೇಕೋ ಅಥವಾ ಊರಿಗೆ ಹೋಗಬೇಕೋ ಅನ್ನೋ ಗೊಂದಲದಲ್ಲಿದ್ದರು.
ಆದ್ರೆ ಗಟ್ಟಿ ಮನಸ್ಸು ಮಾಡಿಕೊಂಡ ರಿಷಬ್ ಪಂತ್ ಅಂದು ರಾತ್ರಿಯೇ ಉತ್ತರಖಂಡ್ ಗೆ ಹೊರಟ್ರು. ಬೆಳಗ್ಗೆ ಅಪ್ಪನ ಅಂತ್ಯಕ್ರಿಯೆ ಮುಗಿಸಿ ಮಧ್ಯಾಹ್ನ ಬೆಂಗಳೂರಿಗೆ ಬಂದಿದ್ರು. ಸಂಜೆ ನೆಟ್ಸ್ ನಲ್ಲಿ ತಾಲೀಮು ನಡೆಸಿದ್ದರು. ರಾತ್ರಿ ಪಂದ್ಯಕ್ಕೆ ಸಿದ್ಧರಾಗಿದ್ದರು.
ಅಷ್ಟೇ ಅಲ್ಲ, ಬೆಂಗಳೂರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಆಕರ್ಷಕ 57 ರನ್ ದಾಖಲಿಸಿದ್ದರು. ಆದ್ರೆ ಆ ಪಂದ್ಯವನ್ನು ಡೆಲ್ಲಿ ತಂಡಕ್ಕೆ ಸಾಧ್ಯವಾಗಲಿಲ್ಲ. ಆದ್ರೆ ರಿಷಬ್ ಪಂತ್ ಎಲ್ಲರ ಮನ ಗೆದ್ದಿದ್ದರು.
ರಿಷಬ್ ಪಂತ್ ರೀತಿಯಲ್ಲೇ ವಿರಾಟ್ ಕೊಹ್ಲಿ ಕೂಡ ಅಪ್ಪನ ನಿಧನ ಸುದ್ದಿ ಕೇಳಿ ಆಟವನ್ನು ಮುಂದುವರಿಸಿದ್ದರು. ಕರ್ನಾಟಕದ ವಿರುದ್ಧ ಆಡುತ್ತಿರುವಾಗ ವಿರಾಟ್ ಕೊಹ್ಲಿ ದಿನದ ಆಟ ಮುಗಿದ ನಂತರ ಅಪ್ಪನ ಅಂತ್ಯಕ್ರಿಯೆ ಮುಗಿಸಿ ಮರುದಿನ ಪಂದ್ಯವನ್ನು ಆಡಿದ್ದರು. ಇತ್ತೀಚೆಗೆ ಮಹಮ್ಮದ್ ಸೀರಾಜ್ ಕೂಡ ಆಸ್ಟ್ರೇಲಿಯಾ ಸರಣಿಯ ವೇಳೆ ಅಪ್ಪನನ್ನು ಕಳೆದುಕೊಂಡಿದ್ದರು. ಅಲ್ಲದೆ ಪಂದ್ಯವನ್ನು ಕೂಡ ಆಡಿದ್ದರು. ಇನ್ನು 1999ರ ವಿಶ್ವಕಪ್ ನಲ್ಲಿ ಸಚಿನ್ ತೆಂಡುಲ್ಕರ್ ಕೂಡ ತನ್ನ ತಂದೆಯನ್ನು ಕಳೆದುಕೊಂಡಾಗ ಮುಂಬೈಗೆ ಬಂದು ಅಂತ್ಯಕ್ರಿಯೆ ಮುಗಿಸಿ ಮತ್ತೆ ಟೀಮ್ ಇಂಡಿಯಾವನ್ನು ಸೇರಿಕೊಂಡು ಶತಕ ಕೂಡ ದಾಖಲಿಸಿದ್ದರು.
ಹೀಗೆ ಕ್ರಿಕೆಟಿಗರ ಬದುಕಿನಲ್ಲೂ ಕೆಲವೊಂದು ದುರ್ಘಟನೆಗಳು ನಡೆದಾಗ ಮನಸ್ಸು ಗಟ್ಟಿ ಮಾಡಿಕೊಂಡು ಬದ್ಧತೆಯನ್ನು ಪ್ರದರ್ಶಿಸಿಸುತ್ತಾರೆ.
ಒಟ್ಟಿನಲ್ಲಿ ರಿಷಬ್ ಪಂತ್ ಅವರ ಬದುಕಿನಲ್ಲಿ ಅವರ ತಂದೆ ಮತ್ತು ತಾಯಿ ಪ್ರಮುಖ ಪಾತ್ರ ವಹಿಸಿದ್ದರು.

Tags: #rishab pant#saakshatvbccidelhi capitalsdelhi capitals skipperIPLipl 2021saakshatvsportsSonnet Academyteam india
ShareTweetSendShare
Join us on:

Related Posts

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

by admin
August 7, 2026
0

    ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು...

indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

by admin
August 7, 2026
0

ಅಂದು..! ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಗೆಲ್ಲುವ ರಾಜ, ಮಹಾರಾಜನಾಗಿ ಸಿಂಹಾಸನದ ಪಟ್ಟಕ್ಕೇರುತ್ತಿದ್ದ. ಅವನ ಒಡ್ಡೋಲಗದ ಪ್ರಭಾವಳಿಯ ಮುಂದೆ ದಂಡನಾಯಕರ ಮತ್ತು ಸೈನಿಕರ ವೀರೋಚಿತ ಹೋರಾಟ ಮಂಕಾದ ಬೆಳಕಿನಲ್ಲಿ...

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

by Shwetha
August 7, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಅತೃಪ್ತಗೊಂಡಿರುವ ಶಾಸಕರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಮಾಜಿ ಸಚಿವ ದಿನೇಶ್‌ ಗುಂಡೂರಾವ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

by Shwetha
August 7, 2026
0

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ...

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

by Shwetha
August 7, 2026
0

ಬೆಂಗಳೂರು ನಗರದ ಐತಿಹಾಸಿಕ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ನಿನ್ನೆ ಅದ್ಧೂರಿಯಾಗಿ ಚಾಲನೆ ದೊರೆತಿದೆ. ಆಗಸ್ಟ್ 6ರಿಂದ ಆಗಸ್ಟ್ 17ರವರೆಗೆ ಒಟ್ಟು 12 ದಿನಗಳ ಕಾಲ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram