ಸರ್ಕಾರದ ವಿರುದ್ಧ ಕಪ್ಪು ಪಟ್ಟಿ ಚಳುವಳಿ ಆರಂಭಿಸಿ ಸಾರಿಗೆ ನೌಕರರು..!
ಇಂದಿನಿಂದ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಕಪ್ಪು ಪಟ್ಟಿ ಚಳುವಳಿ ಆರಂಭಿಸಿದ್ದು, 9 ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದ್ದಾರೆ. ವಿಭಿನ್ನವಾಗಿ ಧರಣಿ ಮಾಡ್ತಿದ್ದು, 7ರಂದು ಎಲ್ಲಾ ಸಾರಿಗೆ, ಬಸ್ ಗಳು ಸ್ಥಬ್ದವಾಗಲಿದೆ. ಇನ್ನೂ ಇಂದಿನಿಂದಲೇ ಸರ್ಕಾರದ ವಿರುದ್ಧ ನೌಕರರು ಸಮರ ಸಾರಿದ್ದು, ನಾಲ್ಕು ನಿಗಮದ ಡಿಪೋಗಳಲ್ಲಿ ನೌಕರರು ಕಪ್ಪು ಪಟ್ಟಿ ಕಟ್ಟಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರೋದು ಕಂಡುಬಂದಿದೆ.
ಬೆಳಗ್ಗೆ 10 ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಚಳುವಳಿ ನಡೆದಿದೆ. ಏಪ್ರಿಲ್ 2-ಬೆಂಗಳೂರಿನ ಸರ್ಕಲ್ ಗಳಲ್ಲಿ ಕುಟುಂಬದವರೊಂದಿಗೆ ಸೇರಿಕೊಂಡು ಬಜ್ಜಿ ಬೊಂಡಾ ಮಾರಾಟ ಮಾಡಿ ಪ್ರತಿಭಟನೆ ನಡೆಸಲಿಸದ್ದಾರೆ.
ಏಪ್ರಿಲ್ 3 – ನೌಕರರು ಹಾಗೂ ಅವರ ಕುಟುಂಬದವರೊಂದಿಗೆ ನಗರಗಳ ಸರ್ಕಲ್ ಗಳಲ್ಲಿ ಮಾನವ ಸರಪಳಿ ಮಾಡಿ ಭಿತ್ತಿಪತ್ರ ಪ್ರದರ್ಶನ ಮಾಡಿ ಪ್ರತಿಭಟನೆ ಮಾಡಲಿದ್ದಾರೆ. ಏಪ್ರಿಲ್ -4 ಸಾರ್ವಜನಿಕರಿಗೆ ಕರಪತ್ರ ಹಂಚುವುದು, ಏಪ್ರಿಲ್ -5 : ಧರಣಿ ಸತ್ಯಾಗ್ರಹ, ಏಪ್ರಿಲ್ -6 : ಸಾಮೂಹಿಕ ಉಪವಾಸ ಸತ್ಯಾಗ್ರಹ, ಏಪ್ರಿಲ್ 7 ರಿಂದ ಕರ್ನಾಟಕದಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸುವ ಮೂಲಕ ಹೋರಾಟ ನಡೆಸಲಿದ್ದಾರೆ.
ನೂತನ ಆರ್ಥಿಕ ವರ್ಷದಲ್ಲೇ 400 ಅಂಕ ಜಿಗಿದ ಸೆನ್ಸೆಕ್ಸ್..!
ಇಂದು ದೇಶದಲ್ಲಿ ಕೊರೊನಾ ಮಹಾಸ್ಫೋಟ – ಒಂದೇ ದಿನ 72 ಸಾವಿರಕ್ಕೂ ಹೆಚ್ಚು ಕೇಸ್ ಗಳು ಪತ್ತೆ..!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ : ಮತಗಟ್ಟೆಯಲ್ಲಿ CRPF ಯೋಧನ ಶವ ಪತ್ತೆ..!