ಸುಳ್ಯ – ಆಭರಣ ಮಳಿಗೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣದ ಜೊತೆಗೆ ಸಿಸಿ ಕ್ಯಾಮರಾವನ್ನೂ ಹೊತ್ತೊಯ್ದ ಕಳ್ಳರು
ಸುಳ್ಯ: ಕಳ್ಳರು ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಆಭರಣ ಮಳಿಗೆಗೆ ನುಗ್ಗಿ ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ.
ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಮೋಹನ್ ಜ್ಯುವೆಲ್ಲರಿ ಮಾರ್ಟ್ ಗೆ ಬುಧವಾರ ರಾತ್ರಿ ಕಳ್ಳರು ನುಗ್ಗಿದ್ದು, ಕಳವುಗೈದ ಘಟನೆ ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ.

ಮುಖ್ಯ ದ್ವಾರದ ಬೀಗ ಮುರಿದು ದುಷ್ಕರ್ಮಿಗಳು ಅಂಗಡಿಯೊಳಗೆ ಪ್ರವೇಶಿಸಿದ್ದು, 10 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕದ್ದಿದ್ದಾರೆ ಎನ್ನಲಾಗಿದೆ.
ಅಂಗಡಿಯ ಮುರಿದ ಬೀಗವನ್ನು ಪತ್ರಿಕೆಯ ವಿತರಣಾ ಹುಡುಗ ಗಮನಿಸಿದ್ದು, ಅವನು ತಕ್ಷಣ ಮಾಲೀಕರಿಗೆ ಮಾಹಿತಿ ನೀಡಿದ್ದಾನೆ.
ವಿಷಯ ತಿಳಿದ ಸ್ಥಳೀಯರು, ಅಂಗಡಿ ಮಾಲಕರು ಹಾಗೂ ಪೋಲೀಸರು ಬಂದು ಪರಿಶೀಲಿಸಿದಾಗ ಚಿನ್ನಾಭರಣ ಹಾಗೂ ನಗದಿನ ಜೊತೆಗೆ ಕಳ್ಳರು ಸಿಸಿ ಕ್ಯಾಮರಾವನ್ನೂ ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
https://twitter.com/SaakshaTv/status/1377656656553680896?s=19
https://twitter.com/SaakshaTv/status/1377656934073999366?s=19
https://twitter.com/SaakshaTv/status/1377657326270783494?s=19
https://twitter.com/SaakshaTv/status/1377657557150392321?s=19
#jewelleryshop #stealitems








