ರಾಜ್ಯದಲ್ಲಿ ಯಾವ ಸಚಿವರಿಗೂ ಸ್ವತಂತ್ರ್ಯ ಅಧಿಕಾರ ಇಲ್ಲ : ಸಿಎಂ ವಿರುದ್ಧ ಯತ್ನಾಳ್ ಸಮರ
ವಿಜಯಪುರ : ರಾಜ್ಯದಲ್ಲಿ ಯಾವ ಸಚಿವರಿಗೂ ಸ್ವತಂತ್ರ್ಯ ಅಧಿಕಾರ ಇಲ್ಲ. ವಿಜಯೇಂದ್ರ ಮುಂದೆ ಇವರೆಲ್ಲ ನಿಂತು ಸರ್ ಎಂದು ಮಾತನಾಡಬೇಕು.
ಕುಳಿತು ಕೊಳ್ಳಲು ಕುರ್ಚಿ ಇರುವುದಿಲ್ಲ ಎಂದು ಈಶ್ವರಪ್ಪ ಪರ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟಿಂಗ್ ಮಾಡಿದ್ದಾರೆ.
ಸಿಎಂ ವಿರುದ್ಧ ಕೆ.ಎಸ್.ಈಶ್ವರಪ್ಪ ಪತ್ರ ಬರೆದ ಬಗ್ಗೆ ಸುದ್ದಿಗಾರರೊಂದಿಗೆ ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ರಾಜ್ಯದಲ್ಲಿ ಸಚಿವರಿಗೆ ಸ್ವತಂತ್ರ್ಯ ಅಧಿಕಾರವಿಲ್ಲ.
ಸಿಎಂ ಸುಪುತ್ರ ವಿಜಯೇಂದ್ರ ಮುಂದೆ ಸಚಿವರು ನಿಂತು ಸರ್ ಎಂದು ಮಾತನಾಡಬೇಕು ಎಂದು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಈಶ್ವರಪ್ಪ ಪತ್ರದ ಬಗ್ಗೆ ಮಾತನಾಡಿ, ಅನುದಾನವನ್ನ ಸಂಪುಟದ ಗಮನಕ್ಕೆ ತರದೇ ಕೊಡುವುದಾದ್ರೆ ಸಚಿವರು ಯಾಕೆ ಬೇಕು..?
ಎಲ್ಲ ಇಲಾಖೆಯ ಸಚಿವನಾಗಿ ವಿಜಯೇಂದ್ರ ಅವರನ್ನು ಮಾಡಿ ಉಳಿದವರೆಲ್ಲ ಶಾಸಕರಾಗಿ ಉಳಿಯಲಿ.
ನಾನು ಅನಂತಕುಮಾರ್, ಈಶ್ವರಪ್ಪ ಹೋರಾಟ ಮಾಡಿ ಪಾರ್ಟಿ ಕಟ್ಟಿದ್ದೇವೆ. ನರೇಂದ್ರ ಮೋದಿ ಅವರ ಪ್ರಾಮಾಣಿಕತೆ ನೋಡಿ ಇಂದು ಜನ ಮತ ಹಾಕುತ್ತಿದ್ದಾರೆ.
ವಿಜಯೇಂದ್ರ ನೇತೃತ್ವದಲ್ಲಿ ಉಪಚುನಾವಣೆ ಆಗುವುದಾದರೆ ಪಕ್ಷ ಏಕೆ ಬೇಕು ಎಂದು ಯತ್ನಾಳ್ ಗುಡುಗಿದರು.










