ಗಮನಿಸಿ : ಕೊರೊನಾ ಕಂಟ್ರೋಲ್ ಗೆ ಹೊಸ ಮಾರ್ಗಸೂಚಿ ಪ್ರಕಟ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿದಿನ ಸಾವಿರಗಟ್ಟಲೇ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೊರೊನಾ ಕಂಟ್ರೋಲ್ ಗೆ ಹೊಸ ಮಾರ್ಗಸೂಚಿಗಳನ್ನ ಪ್ರಕಟ ಮಾಡಿದೆ.
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಬೆಂಗಳೂರು ಸೇರಿ 8 ಜಿಲ್ಲೆಗಳಲ್ಲಿ ಮಾತ್ರ ಟಫ್ ರೂಲ್ಸ್ ಜಾರಿಗೆ ತಂದಿದೆ.
ಎಂಟು ಜಿಲ್ಲೆಗಳು : ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು, ಕಲಬುರಗಿ, ಉಡುಪಿ, ಧಾರವಾಡ, ಬೆಂಗಳೂರು ಗ್ರಾಮಾಂತರ.
ಮಾರ್ಗಸೂಚಿ
ರಾಜ್ಯಾದ್ಯಂತ 6-9 ಶಾಲೆಗಳು ಬಂದ್.
ವಿದ್ಯಾಗಮ, ತರಗತಿಗಳು ಕ್ಲೋಸ್, 10,11,12 ಎಂದಿನಂತೆ ಇರುತ್ತೆ
ಉನ್ನತ ಶಿಕ್ಷಣ ಕೋರ್ಸುಗಳು, ವೃತ್ತಿಪರ ಕೋರ್ಸುಗಳ ತರಗತಿಗಳೂ ಸ್ಥಗಿತ
ವೈದ್ಯಕೀಯ ಕೋರ್ಸುಗಳ ಪರೀಕ್ಷೆ ಅಬಾಧಿತ. ಬೋಡಿರ್ಂಗ್, ವಸತಿ ಶಾಲೆಗಳೂ ಬಂದ್
ವಸತಿ ಶಾಲೆಗಳು, ಹಾಸ್ಟಲ್ ಮತ್ತು ಬೋಡಿರ್ಂಗ್ ಸ್ಕೂಲ್ ಕ್ಲೋಸ್.
ಜಾತ್ರೆ, ಅಪಾರ್ಟ್ ಮೆಂಟ್ ಗಳಲ್ಲಿ ಜಿಮ್, ಸ್ವಿಮ್ಮಿಂಗ್ ಪೂಲ್, ಪಾರ್ಟಿ.
ಕ್ಲಬ್ ಹೌಸ್, ಸ್ವಿಮ್ಮಿಂಗ್ ಪೂಲ್, ಜಿಮ್ ಕ್ಲೋಸ್. ಪ್ರತಿಭಟನೆ, ರ್ಯಾಲಿ, ಧರಣಿಗಳೂ ಬಂದ್.
ಬಸ್ ಗಳಲ್ಲಿ ಸೀಟುಗಳಿರುವಷ್ಟೇ ಪ್ರಯಾಣಿಕರಿಗೆ ಅವಕಾಶ.
ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಜನರಿಗೆ ಮಾತ್ರ ಚಿತ್ರ ವೀಕ್ಷಣೆಗೆ ಅವಕಾಶ.
ಪಬ್, ಬಾರ್, ರೆಸ್ಟೋರೆಂಟ್ ಗಳಲ್ಲೂ ಶೇ. 50 ರಷ್ಟು ಮಾತ್ರ ಗ್ರಾಹಕರಿಗೆ ಅವಕಾಶ.
ಈ ನಿಯಮಗಳು ಏಪ್ರಿಲ್ 20ರ ವರೆಗೆ ಅನ್ವಯ.









