ಕೋಲಾರ – ಕೊರೋನಾ ಕಾರಣವಾಗಿ ಇಡೀ ರಾಷ್ಟ್ರ ಲಾಕ್ ಡೌನ್ ನಲ್ಲಿದೆ. ಇದರ ಮಧ್ಯೆ ಮದ್ಯವ್ಯಸನಿಗಳು ಮದ್ಯಪಾನ ಮಾಡಲು ಮದ್ಯ ಸಿಗದ ಕಾರಣ ಕೋಲಾರದ ಹಲವೆಡೆ ಬಾರ್ ಗಳ ದರೋಡೆ ಸಹ ಮಾಡಿದ್ದರು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕಳ್ಳ ಬಟ್ಟಿ ಸಾರಾಯಿ ತಯಾರಿಸಲು ಮುಂದಾಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕದರಿನತ್ತ ಗ್ರಾಮದಲ್ಲಿ ಕಳ್ಳಬಟ್ಟಿ ತಯಾರಿಸಲು ಮುಂದಾಗಿದ್ದಾರೆ. ಅದೇ ಗ್ರಾಮದ ರವಣೋಜಿ ರಾವ್ ಹಾಗೂ ಬಾಬು ಎಂಬ ವ್ಯಕ್ತಿಗಳು ತಮ್ಮ ತೋಟದ ಮನೆಯಲ್ಲಿ ಸಾರಾಯಿ ಬಟ್ಟಿ ಇಳಿಸಲು ಸಕಲ ಸಿದ್ದತೆ ಮಾಡಿಕೊಂಡಿದ್ದರು. ವಿಚಾರ ತಿಳಿದ ಕೋಲಾರ ಹಾಗೂ ಕೆಜಿಎಫ್ ನ ಅಬಕಾರಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ವೇಳೆ 180 ಲೀಟರ್ ಬೆಲ್ಲದ ಕೊಳೆ, 4 ಕೆಜಿ ಜಾಲಿ ಚಕ್ಕೆ, 30 ಕೆಜಿ ಬೆಲ್ಲ ಸಹಿತ ಸ್ಥಳದಲ್ಲಿದ್ದ ಪರಿಕರಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೂ ಆರೋಪಿಗಳನ್ನು ಸ್ಥಳದಲ್ಲೇ ವಶಕ್ಕೆ ಪಡೆದ ಅಬಕಾರಿ ಪೊಲೀಸರು ಮತ್ತಿಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇನ್ನೂ ಲಾಕ್ ಡೌನ್ ನಿಂದಾಗಿ ಬಾರ್ ಗಳನ್ನು ಬಂದ್ ಮಾಡಿದ್ದೇ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.
AIKYAM CUP 2026–27 – ವಾಲಿಬಾಲ್ನಲ್ಲಿ DBIPUC ತಂಡಕ್ಕೆ ರನ್ನರ್ಅಪ್ ಗೌರವ
AIKYAM CUP 2026–27 - ವಾಲಿಬಾಲ್ನಲ್ಲಿ DBIPUC ತಂಡಕ್ಕೆ ರನ್ನರ್ಅಪ್ ಗೌರವ ಬೆಂಗಳೂರು: ಇಂದಿರಾನಗರದ ಜೈನ್ ಪಿಯು ಹಾಗೂ ಡಿಗ್ರಿ ಕಾಲೇಜಿನಲ್ಲಿ ಆಯೋಜಿಸಿದ್ದ AIKYAM CUP 2026–27 ವಾಲಿಬಾಲ್...








