‘ನಾಲಾಯಕ್’ ಪದ ಬಳಕೆ : ನಿರಾಣಿ ವಿರುದ್ಧ ಯತ್ನಾಳ್ ಬುಸ್ ಬುಸ್
ವಿಜಯಪುರ : ‘ನಾಲಾಯಕ್’ ಪದ ಬಳಕೆ ವಿಚಾರವಾಗಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬುಸುಗುಟ್ಟಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಯಾರು ನಾಲಾಯಕರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೇಟಿಯವರ ಸಿಡಿ ಮಾಡಿದವರು ನಾಲಾಯಕರು.
ಯಾರ್ಯಾರಿಗೆ ಸಪ್ಲೈಯರ್ ಆಗಿ ಇದ್ದಾರೋ ಅವರು ನಾಲಾಯಕರು. ನಾನು ಸಪ್ಲೈಯರ್ ಅಲ್ಲ, ಯಾರಿಗೂ ದುಡ್ಡು ಕೊಟ್ಟಿಲ್ಲ.
ಮಂತ್ರಿಯಾಗಲು ಯಾರ ಕಾಲು ಹಿಡಿದಿಲ್ಲ. ಅಂತಹ ನಾಲಾಯಕರಿಂದ ನಾವು ಏನೂ ಕಲಿಯಲು ಸಾಧ್ಯವಿಲ್ಲ ಎಂದು ಗುಡುಗಿದರು.
ಯಾರು ಯಾರ್ಯಾರಿಗೆ ಏನು ಸಪ್ಲೈ ಮಾಡಿದ್ದಾರೆ ಎಂಬ ಮಾಹಿತಿ ನನಗಿದೆ.
ಯಡಿಯೂರಪ್ಪನವರಿಗೆ, ಮೇಲಿನವರಿಗೆ ಏನೇನು ಸಪ್ಲೈ ಮಾಡಿದ್ದಾರೆ ಎಂದು ಎಲ್ಲವನ್ನೂ ಕಾಲ ಬಂದಾಗ ಹೇಳುತ್ತೇನೆ ಎಂದು ಬಾಂಬ್ ಸಿಡಿಸಿದ ಯತ್ನಾಳ್, ಕೆಲವರು ಸಿಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿಯಾಗಿದ್ದಾರೆ ಎಂದು ದೂರಿದರು.










