ಐಪಿಎಲ್ 2021- ದುಬಾರಿ ಆಟಗಾರ.. ಆಸೀಸ್ ನ ಹೀರೋ.. ಐಪಿಎಲ್ ನಲ್ಲಿ ವಿಲನ್,,! .
ಗ್ಲೇನ್ ಮ್ಯಾಕ್ಸ್ ವೆಲ್. ಆಸ್ಟ್ರೇಲಿಯಾದ ಆಲ್ ರೌಂಡರ್. ಸ್ಫೋಟಕ ಆಟದ ಮೂಲಕ ಮಿಂಚು ಹರಿಸುವ ಗ್ಲೇನ್ ಮ್ಯಾಕ್ಸ್ ವೆಲ್ ಕ್ರೀಸ್ ನಲ್ಲಿ ಇದ್ದಷ್ಟು ಸಮಯ ಅಪಾಯಕಾರಿ ಆಟಗಾರ.
ಆದ್ರೆ ಐಪಿಎಲ್ ನಲ್ಲಿ ಹಾಗಲ್ಲ. ಕಳೆದ ಎಂಟು ವರ್ಷಗಳಿಂದ ಗ್ಲೇನ್ ಮ್ಯಾಕ್ಸ್ ವೆಲ್ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಈ ಬಾರಿಯ ಐಪಿಎಲ್ ಗ್ಲೇನ್ ಮ್ಯಾಕ್ಸ್ ವೆಲ್ ಅವರಿಗೆ 9ನೇಯದ್ದು.
ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಕಿಂಗ್ಸ್ ಪಂಜಾಬ್ ಮತ್ತು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ.
Glenn Maxwell’s been very disappointing in ipl
ಐಪಿಎಲ್ ನಲ್ಲಿ ಒಟ್ಟು 82 ಪಂದ್ಯಗಳನ್ನು ಆಡಿರುವ ಮ್ಯಾಕ್ಸ್ ವೆಲ್ 1505 ರನ್ ಗಳಿಸಿದ್ದಾರೆ. 2014ರಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ 552 ರನ್ ಗಳಿಸಿದ್ದರು. 2017ರ ಐಪಿಎಲ್ ನಲ್ಲಿ 310 ರನ್ ದಾಖಲಿಸಿದ್ದರು. ಇನ್ನುಳಿದ ಐಪಿಎಲ್ ನಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಕಳೆದ ಬಾರಿಯ ಐಪಿಎಲ್ ನಲ್ಲಿ 13 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 108 ರನ್. ಹಾಗೇ ಒಟ್ಟು 82 ಪಂದ್ಯಗಳಲ್ಲಿ 19 ವಿಕೆಟ್ ಪಡೆದಿದ್ದಾರೆ.
ಈ ಅಂಕಿ ಅಂಶಗಳ ಪ್ರಕಾರ ಐಪಿಎಲ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಅಷ್ಟಕ್ಕಷ್ಟೇ. ಆದ್ರೆ ತನ್ನ ಜೇಬಿಗೆ ಕೋಟಿ ಕೋಟಿ ಹಣ ತುಂಬಿಸಿಕೊಂಡಿದ್ದಾರೆ. ಯಾಕಂದ್ರೆ ಪ್ರತಿ ಐಪಿಎಲ್ ಹರಾಜಿನಲ್ಲೂ ಗ್ಲೇನ್ ಮ್ಯಾಕ್ಸ್ ವೆಲ್ ಗೆ ಭಾರಿ ಡಿಮ್ಯಾಂಡ್. ದುಬಾರಿ ಬೆಲೆಗೆ ಹರಾಜು ಆಗುತ್ತಿರುವ ಗ್ಲೇನ್ ಮ್ಯಾಕ್ಸ್ ವೆಲ್ ಮಾತ್ರ ಐಪಿಎಲ್ ನಲ್ಲಿ ಸಪ್ಪೆ ಪ್ರದರ್ಶನ ನೀಡಿದ್ದಾರೆ.
ಹೀಗಾಗಿ ಗ್ಲೇನ್ ಮ್ಯಾಕ್ಸ್ ವೆಲ್ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ವೀರೇಂದ್ರ ಸೆಹ್ವಾಗ್, ಇದೀಗ ಗೌತಮ್ ಗಂಭೀರ್ ಕೂಡ ಟೀಕೆ ಮಾಡುತ್ತಿದ್ದಾರೆ.
ಕೆಕೆಆರ್ ತಂಡಕ್ಕಾಗಿ ಆಂಡ್ರೆ ರಸೆನ್ ನೀಡುತ್ತಿರುವ ಪ್ರದರ್ಶನದ ರೀತಿ ಗ್ಲೇನ್ ಮ್ಯಾಕ್ಸ್ ವೆಲ್ ನೀಡುತ್ತಿಲ್ಲ. ಈ ಬಾರಿಯ ಐಪಿಎಲ್ ಗಾಗಿ ಆರ್ ಸಿಬಿ ತಂಡ ಗ್ಲೇನ್ ಮ್ಯಾಕ್ಸ್ ವೆಲ್ 14.25 ಕೋಟಿ ನೀಡಿ ಖರೀದಿ ಮಾಡಿತ್ತು.
ಒಟ್ಟಿನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಈ ಬಾರಿಯ ಐಪಿಎಲ್ ನಲ್ಲಾದ್ರೂ ಕ್ಲಿಕ್ ಆಗುತ್ತಾರಾ ಅನ್ನೋದನ್ನು ಕಾದು ನೋಡಬೇಕು.
ಆರ್ ಸಿಬಿ ಪರ ಗ್ಲೇನ್ ಮ್ಯಾಕ್ಸ್ ವೆಲ್ ಅವರು ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ಒಂದಂತೂ ನಿಜ, ಈ ಹಿಂದಿನ ಐಪಿಎಲ್ ನಲ್ಲಿ ಫ್ರಾಂಚೈಸಿಗಳು ಗ್ಲೇನ್ ಮ್ಯಾಕ್ಸ್ ವೆಲ್ ಅವರಿಗೆ ಸೂಕ್ತ ಕ್ರಮಾಂಕದಲ್ಲಿ ಆಡುವ ಅವಕಾಶವನ್ನು ನೀಡಿಲ್ಲ. ಹೀಗಾಗಿ ಸ್ವತಂತ್ರ್ಯವಾಗಿ ಆಡುವ ಅವಕಾಶ ಸಿಕ್ಕಿಲ್ಲ.
ಒಟ್ಟಿನಲ್ಲಿ ಆರ್ ಸಿಬಿ ತಂಡದಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಫ್ರೀಯಾಗಿ ಆಡುವ ಅವಕಾಶ ಸಿಕ್ಕಿದ್ರೆ ಖಂಡಿತವಾಗಿಯೂ ಗ್ಲೇನ್ ಮ್ಯಾಕ್ಸ್ ವೆಲ್ ಬ್ಯಾಟ್ ನಿಂದ ರನ್ ಹರಿದುಬರಬಹುದು.