ಇಸಿಐಎಲ್ – 10/12/ಐಟಿಐ/ಡಿಪ್ಲೊಮಾ/ಪದವಿ ಆದವರಿಗೆ ಉದ್ಯೋಗಾವಕಾಶ
ಇಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಸೈಂಟಿಫಿಕ್ ಅಸಿಸ್ಟೆಂಟ್-ಎ, ಜ್ಯೂನಿಯರ್ ಆರ್ಟಿಸನ್, ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ.
ಒಟ್ಟು 111 ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದ್ದು, ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 17 ಮತ್ತು ಏಪ್ರಿಲ್ 18ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಹುದ್ದೆಗಳ ವಿವರ:
ಸೈಂಟಿಫಿಕ್ ಅಸಿಸ್ಟೆಂಟ್-ಎ – 24 ಹುದ್ದೆಗಳು
ಜ್ಯೂನಿಯರ್ ಆರ್ಟಿಸನ್- 86 ಹುದ್ದೆಗಳು
ಆಫೀಸ್ ಅಸಿಸ್ಟೆಂಟ್- 1 ಹುದ್ದೆ
ಒಟ್ಟು 111 ಹುದ್ದೆಗಳು
ವಿದ್ಯಾರ್ಹತೆ:
ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು
10ನೇ ತರಗತಿ, 12ನೇ ತರಗತಿ, ಐಟಿಐ, ಡಿಪ್ಲೋಮಾ, ಬಿ.ಎಸ್ಸಿ, ಬಿಎ ಮತ್ತು ಬಿ.ಕಾಂ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ:
ನೇರ ಸಂದರ್ಶನದಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು, ಮಾರ್ಚ್ 31,2021ಕ್ಕೆ ಅನ್ವಯವಾಗುವಂತೆ ಗರಿಷ್ಟ 25 ವರ್ಷ ವಯೋಮಿತಿಯೊಳಗಿನವರಾಗಿರಬೇಕು. ವಯೋಮಿತಿ ನಿಯಮದಲ್ಲಿ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಟ್ರೇಡ್ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಸಂದರ್ಶನದ ವಿವರ:
ಸಂದರ್ಶನದಲ್ಲಿ ಭಾಗವಹಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 17 ಮತ್ತು ಏಪ್ರಿಲ್ 18, 2021ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಸಂದರ್ಶನ ನಡೆಯುವ ಸ್ಥಳ:
Atomic Energy Central School,
RMP Yelwal Colony,
Hunsur Road,
Yelwal Post,
Mysore-571130.
ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಇಸಿಐಎಲ್ ನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಬಹುದಾಗಿದೆ.
https://twitter.com/SaakshaTv/status/1380210170370818052?s=19
https://twitter.com/SaakshaTv/status/1380209602923356160?s=19
https://twitter.com/SaakshaTv/status/1378178003537162243?s=19
https://twitter.com/SaakshaTv/status/1379847615378989058?s=19
#Saakshatv #jobs #ecialrecruitment








