ಇಸಿಐಎಲ್ – 10/12/ಐಟಿಐ/ಡಿಪ್ಲೊಮಾ/ಪದವಿ ಆದವರಿಗೆ ಉದ್ಯೋಗಾವಕಾಶ

1 min read
Saakshatv jobs ecial recruitment

ಇಸಿಐಎಲ್ – 10/12/ಐಟಿಐ/ಡಿಪ್ಲೊಮಾ/ಪದವಿ ಆದವರಿಗೆ ಉದ್ಯೋಗಾವಕಾಶ

ಇಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಸೈಂಟಿಫಿಕ್ ಅಸಿಸ್ಟೆಂಟ್-ಎ, ಜ್ಯೂನಿಯರ್ ಆರ್ಟಿಸನ್, ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ.
ಒಟ್ಟು 111 ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದ್ದು, ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 17 ಮತ್ತು ಏಪ್ರಿಲ್ 18ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
Saakshatv jobs ecial recruitment

ಹುದ್ದೆಗಳ ವಿವರ:

ಸೈಂಟಿಫಿಕ್ ಅಸಿಸ್ಟೆಂಟ್-ಎ – 24 ಹುದ್ದೆಗಳು

ಜ್ಯೂನಿಯರ್ ಆರ್ಟಿಸನ್- 86 ಹುದ್ದೆಗಳು

ಆಫೀಸ್ ಅಸಿಸ್ಟೆಂಟ್- 1 ಹುದ್ದೆ

ಒಟ್ಟು 111 ಹುದ್ದೆಗಳು

ವಿದ್ಯಾರ್ಹತೆ:

ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು
10ನೇ ತರಗತಿ, 12ನೇ ತರಗತಿ, ಐಟಿಐ, ಡಿಪ್ಲೋಮಾ, ಬಿ.ಎಸ್ಸಿ, ಬಿಎ ಮತ್ತು ಬಿ.ಕಾಂ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ:

ನೇರ ಸಂದರ್ಶನದಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು, ಮಾರ್ಚ್ 31,2021ಕ್ಕೆ ಅನ್ವಯವಾಗುವಂತೆ ಗರಿಷ್ಟ 25 ವರ್ಷ ವಯೋಮಿತಿಯೊಳಗಿನವರಾಗಿರಬೇಕು. ವಯೋಮಿತಿ ನಿಯಮದಲ್ಲಿ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 5 ವ‍ರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆಯನ್ನು ನೀಡಲಾಗಿರುತ್ತದೆ.
Saakshatv jobs ecial recruitment

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಟ್ರೇಡ್ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಸಂದರ್ಶನದ ವಿವರ:

ಸಂದರ್ಶನದಲ್ಲಿ ಭಾಗವಹಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 17 ಮತ್ತು ಏಪ್ರಿಲ್ 18, 2021ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಸಂದರ್ಶನ ನಡೆಯುವ ಸ್ಥಳ:

Atomic Energy Central School,

RMP Yelwal Colony,

Hunsur Road,

Yelwal Post,

Mysore-571130.

ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಇಸಿಐಎಲ್ ನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಬಹುದಾಗಿದೆ.

#Saakshatv #jobs #ecialrecruitment

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd