ಕೊರೋನಾ ಮಹಾಮಾರಿಯಿಂದ ಜಗತ್ತೇ ನಲುಗಿದ್ದು, ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಮನೆಯಿಂದ ಹೊರಗೆ ಬರದ ಪರಿಸ್ಥಿತಿಯಲ್ಲಿ ಇದ್ದಾರೆ. ಇಂದು ಕರಾವಳಿಯಲ್ಲಿ ಸಂಭ್ರಮದ ಸೌರಮಾನ ಯುಗಾದಿ(ಬಿಸು). ಆದರೆ ಕೊರೋನಾದಿಂದ ಹಬ್ಬದ ಸಡಗರ ಕಳೆಗುಂದಿದೆ.
ಕರಾವಳಿಯ ಸಂಭ್ರಮದ ಬಿಸು ಪರ್ಬಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ತುಳು ಭಾಷೆಯಲ್ಲಿ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.
ಬಿಸುತ ದಿನ ಪೊಸತ್ ಮನಸ್
ಪೊಸತ್ ಕನಸ್ ಪೊಸತ್ ತೆನಸ್
ಮಾತಲಾ ಪೊಸತ್ ಪೊಸತ್ ಆವಡ್
ಪೊಸ ವರ್ಷೊಡು ಪರತ್ ಮಹಾಮಾರಿ
ದೂರ ಅದ್ ಸುಖ ಸಂತೋಸ ನೆಲೆಸಡ್
ಮಾತೆರೆಗ್ ಬಿಸುತ ಸುಭಾಸುಯೊಲು.
(ಬಿಸುವಿನ ದಿನ ಹೊಸ ಕನಸು, ಹೊಸ ಮನಸು, ಹೊಸ ತಿನಿಸು, ಎಲ್ಲವೂ ಹೊಸತಾಗಲಿ. ಈ ಹೊಸ ವರ್ಷದಲ್ಲಿ ಹಳೆಯ ಮಹಾಮಾರಿ ದೂರವಾಗಿ ಸುಖ ಸಂತೋಷ ನೆಲೆಸಲಿ. ಎಲ್ಲರಿಗೆ ಬಿಸುವಿನ ಶುಭಾಶಯಗಳು)
ಎಂದು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಬಳಿಕ ಕನ್ನಡದಲ್ಲಿ ಟ್ವೀಟ್ ಮಾಡಿದ್ದು ಸೌರ ಸಂವತ್ಸರ,’ ‘ಸ್ಥಿರ ಸಂವತ್ಸರ’ ಎಂದು ಕರೆಯಲಾಗುವ ‘ವಿಷು’ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ಎಲ್ಲರಿಗೂ ಹಾರ್ದಿಕ ಶುಭಾಶಯಗಳು. ಈ ಸೌರಮಾನ ಯುಗಾದಿಯು, ಎಲ್ಲರ ಬಾಳಿನಲ್ಲೂ ಸುಖ, ಸಂತೋಷಗಳನ್ನು ತರಲಿ ಎಂದು ಶುಭ ಕೋರಿದ್ದಾರೆ.








