ಬಂಗಾಳದ ಜನ ಕೇಳಿದ್ರೆ ರಾಜೀನಾಮೆ ನೀಡುವೆ : ಅಮಿತ್ ಶಾ
ಪಶ್ಚಿಮ ಬಂಗಾಳ : ಬಂಗಾಳದ ಜನರು ಕೇಳಿದರೆ ಖಂಡಿತವಾಗಿ ನಾನು ರಾಜೀನಾಮೆ ನೀಡಲು ಸಿದ್ಧ.
ಆದರೆ, ಮೇ. 2ರಂದು ರಾಜೀನಾಮೆ ನೀಡಲು ನೀವು ಸಿದ್ಧರಾಗಿರಿ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಧುಪ್ಗುರಿಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಮತಾ ಬ್ಯಾನರ್ಜಿ ಭಾಷಣದಲ್ಲಿ ಬಂಗಾಳದ ಅಭಿವೃದ್ಧಿಗಿಂತಲೂ ಅಮಿತ್ ಶಾ ಬಗ್ಗೆ ಹೆಚ್ಚು ಮಾತನಾಡುತ್ತಾರೆ.
ಇದೀಗ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಹೇಳ್ತಿದ್ದಾರೆ. ಬಂಗಾಳದ ಜನರು ಕೇಳಿದರೆ ಖಂಡಿತವಾಗಿ ನಾನು ರಾಜೀನಾಮೆ ನೀಡಲು ಸಿದ್ಧ. ಆದರೆ, ಮೇ. 2ರಂದು ರಾಜೀನಾಮೆ ನೀಡಲು ನೀವು ಸಿದ್ಧರಾಗಿರಿ ಎಂದು ಕಿಡಿಕಾರಿದ್ದಾರೆ.
ಇನ್ನು ಮಮತಾ ಬ್ಯಾನರ್ಜಿ ವಿನಾಕಾರಣ ಬಿಜೆಪಿ ನಿಂದನೆ ಮಾಡ್ತಿದ್ದಾರೆ. ಬಿಜೆಪಿ ನಿಮ್ಮ ವಿರುದ್ಧ ಸ್ಪರ್ಧಿಸುತ್ತಿದೆ ಎಂದು ನೀವು ತಪ್ಪಾಗಿ ಭಾವಿಸಿದ್ದೀರಿ.
ಬಂಗಾಳದ ತಾಯಂದಿರು, ಸಹೋದರಿಯರಯ ಗೂರ್ಖಾ ಸಮುದಾಯ, ಚಹಾ ಕಾರ್ಮಿಕರು ನಿಮ್ಮ ವಿರುದ್ಧ ಸ್ಪರ್ಧೆ ಮಾಡಿದ್ದಾರೆ ಎಂದರು.










