ಮುಂದುವರಿದ ಸಾರಿಗೆ ನೌಕರರ ಮುಷ್ಕರ : ಪ್ರಯಾಣಿಕರ ಪರದಾಟ bangalore
ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಇಂದಿಗೆ ಏಳನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆ ಯುಗಾದಿಗೆ ಊರಿಗೆ ಹೋಗುವ ಜನರು ಬಸ್ ಗಳಿಲ್ಲದೇ ಪರದಾಡುವಂತಾಗಿದೆ.
ಸಾರಿಗೆ ಬಸ್ ಗಳು ಇಲ್ಲದ ಕಾರಣ ಜನರು ಕೊರೊನಾವನ್ನ ಲೆಕ್ಕಿಸದೇ ಸಿಕ್ಕ ಸಿಕ್ಕ ವಾಹನಗಳಲ್ಲಿ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.
ಖಾಸಗಿ ಬಸ್ ಗಳಲ್ಲಿ ಜೋತು ಬಿದ್ದು, ಟಾಪ್ ಮೇಲೆ ಕುಳಿತು ಜನರು ಊರುಗಳತ್ತ ಹೊರಟಿದ್ದಾರೆ.
ಬೆಂಗಳೂರು ಹೊರವಲಯ 8 ನೇ ಮೈಲ್, ನವಯುಗ ಟೋಲ್, ಮೈಸೂರು ರಸ್ತೆಗಳಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ.
ರಸ್ತೆಗೆ ಬರುವ ಬೆರಳಣಿಕೆ ಬಸ್ ಏರಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ಹತ್ತುತ್ತಿದ್ದಾರೆ.
ಇನ್ನೊಂದೆಡೆ ಖಾಸಗಿ ಬಸ್ ಗಳಲ್ಲಿ ಜನರು ತೆರಳುತ್ತಿದ್ದರೂ ಅಲ್ಲಿ ಕೊರೊನಾ ನಿಯಮಗಳನ್ನ ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ.










