ದಾವಣಗೆರೆ ಆನಗೋಡು ಬಳಿ ಮಾಜಿ ಸಚಿವ ಯು.ಟಿ. ಖಾದರ್ ಕಾರು ಅಪಘಾತ
ಮಾಜಿ ಸಚಿವ ಯು.ಟಿ. ಖಾದರ್ ಅವರ ಕಾರು ದಾವಣಗೆರೆ ಬಳಿಯ ಆನಗೋಡು ಬಳಿ ಅಪಘಾತಗೊಂಡಿದೆ. ಬುಧವಾರ ಬೆಳಿಗ್ಗೆ ಉಳ್ಳಾಲ ಶಾಸಕ ಖಾದರ್ ಅವರ ಕಾರು ಮತ್ತು ಕಂಟೈನರ್ ನಡುವೆ ಅಪಘಾತ ಸಂಭವಿಸಿದೆ. ಬೆಳಗಾವಿಯಲ್ಲಿ ಚುನಾವಣಾ ಪ್ರಚಾರ ಮುಗಿಸಿಕೊಂಡು ಶಾಸಕ ಯುಟಿ ಖಾದರ್ ಬೆಂಗಳೂರಿಗೆ ಆಗಮಿಸುತ್ತಿರುವ ವೇಳೆ ಅಪಘಾತ ಉಂಟಾಗಿದೆ.
ದಾವಣಗೆರೆಯ ಅನಗೋಡು ಬಸ್ ನಿಲ್ದಾಣದ ಸಮೀಪ ಮಾಜಿ ಸಚಿವ ಯು.ಟಿ. ಖಾದರ್ ಅವರ ಕಾರು ಹಾಗೂ ಕಂಟೈನರ್ ನಡುವೆ ಅಪಘಾತ ಸಂಭವಿಸಿದೆ. ಇನ್ನೋವಾ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಖಾದರ್ ಅವರಿಗೆ ಯಾವುದೇ ಅಪಾಯ ಉಂಟಾಗಿಲ್ಲ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಎಸ್.ಪಿ. ಹನುಮಂತರಾಯ ತೆರಳಿ ಪರಿಶೀಲನೆ ನಡೆಸಿದ್ದಾರೆ
ಯಾವುದೇ ಅಪಾಯವಾಗದೆ ಇರುವ ಹಿನ್ನೆಲೆಯಲ್ಲಿ ದೂರು ದಾಖಲಿಸದಿರಲು ಯು.ಟಿ. ಖಾದರ್ ನಿರ್ಧರಿಸಿ ಕಂಟೈನರ್ ಲಾರಿಯನ್ನು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
#Exminister #UTKhadar #caraccident #davanagere
ಮಧುಮೇಹದಿಂದ ಅಜೀರ್ಣದವರೆಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ನೀರು ಕುಡಿಯುವುದರ ಪ್ರಯೋಜನಗಳು#Saakshatv #healthtips #gingerwater https://t.co/P464W2TPr7
— Saaksha TV (@SaakshaTv) April 11, 2021
ಎಲ್ಐಸಿಯ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಿ, ಪ್ರತಿ ತಿಂಗಳು 8000 ರೂಪಾಯಿ ಪಿಂಚಣಿ ಪಡೆಯಿರಿ#lic-new-scheme #pensionplan https://t.co/RGN4GIPoq0
— Saaksha TV (@SaakshaTv) April 11, 2021
ಇನ್'ಸ್ಟಂಟ್ (instant) ಸಬ್ಬಕ್ಕಿ /ಸಾಬುದಾನ /ಸಾಗು ಇಡ್ಲಿ#Saakshatv #cookingrecipe #instantsabbakkiidli https://t.co/3pXy3Pe84Z
— Saaksha TV (@SaakshaTv) April 11, 2021
ಇಂದಿರಾನಗರದ ಗೂಂಡಾ ಜೊತೆ ಇಂದಿರಾನಗರದ ಗೂಂಡಿ#rahuldravid #deepikapadukone #Indiranagar https://t.co/UXIjMyNhn1
— Saaksha TV (@SaakshaTv) April 11, 2021