ಕೊರೋನಾ ನಿಯಂತ್ರಣಕ್ಕೆ ಬಿಗಿ ಕ್ರಮ – ಸಿಎಂ ಜೊತೆಗೆ ಚರ್ಚೆ ನಂತರ ನಿರ್ಧಾರ – ಸುಧಾಕರ್
ಬೆಂಗಳೂರು : ಕೊರೋನಾ ನಿಯಂತ್ರಣಕ್ಕೆ ಬಿಗಿ ಕ್ರಮ ಮಾಡುವ ವಿಚಾರವಾಗಿ ಸಿಎಂ ಬಿಎಸ್ ವೈ ಬಂದ ಕೂಡಲೇ ಬಿಗಿ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಹೇಳಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿರುವ ಅವರು, ತಾಂತ್ರಿಕ ಸಲಹಾ ಸಮಿತಿಯವ್ರು ಇವತ್ತು ವರದಿ ಕೊಡ್ತಾರೆ. ನಾಳೆ ಸಿಎಂ ಬಿಎಸ್ವೈ ಭೇಟಿ ಯಾಗಿ ವರದಿ ಬಗ್ಗೆ ಚರ್ಚೆ ಮಾಡುತ್ತೇವೆ. ಬೇರೆ ರಾಜ್ಯಗಳಲ್ಲಿ ಮಾಡಿರೋ ಕಠಿಣ ಕ್ರಮದ ಬಗ್ಗೆ ಪರಿಶೀಲನೆ ನಡೆಸಿದ್ದೇವೆ.
ಮಹಾರಾಷ್ಟ್ರದಲ್ಲಿ ಜನತಾ ಕರ್ಪ್ಯೂ ಮಾಡಿದ್ದಾರೆ. ಆದರೆ ಅದನ್ನು ಇಲ್ಲಿ ಮಾಡುವ ಅಗತ್ಯತೆ ಇಲ್ಲ. ಯಾಕೆಂದರೆ ಮಹಾರಾಷ್ಟ್ರದಷ್ಟು ಸೋಂಕಿನ ಪ್ರಮಾಣ ನಮ್ಮಲ್ಲಿ ಇಲ್ಲ. ಹೀಗಾಗಿ ಬೇರೆ ರಾಜ್ಯಗಳ ಕಠಿಣ ಕ್ರಮಗಳ ಬಗ್ಗೆ ಗಮನಿಸುತ್ತಿದ್ದೇವೆ. ಇಲ್ಲಿನ ಪರಿಸ್ಥಿತಿ ನೋಡಿಕೊಂಡು ಕಠಿಣ ಕ್ರಮದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.








