“ಕೋಡಿಹಳ್ಳಿ ಯಾವನು, ಅವನೊಬ್ಬ 420” : ರೇಣುಕಾಚಾರ್ಯ
ದಾವಣಗೆರೆ : ಕೋಡಿಹಳ್ಳಿ ಯಾವನು, ಅವನೊಬ್ಬ 420 ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಶಾಸಕ ಎಂಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ದಾವಣಗೆರೆಯ ಹೊನ್ನಾಳಿಯಲ್ಲಿ ಕೆಎಸ್ ಆರ್‍ಟಿಸಿ ನೌಕರರಿಂದ ಮನವಿ ಪಡೆದು ದೂರವಾಣಿ ಮೂಲಕ ಸಾರಿಗೆ ಸಚಿವರ ಜೊತೆ ಮಾತನಾಡಿದ ಅವರು, ಕೋಡಿಹಳ್ಳಿ ಯಾವನು, ಅವನೊಬ್ಬ 420. ಅವನನ್ನು ಬಿಟ್ಟು ಮಾತುಕಥೆಗೆ ಬನ್ನಿ. ಕೋಡಿಹಳ್ಳಿ ಕಾಂಗ್ರೆಸ್ ಏಜೆಂಟ್ ಇದ್ದ ಹಾಗೆ ಅವನನ್ನು ಬಿಟ್ಟು ಮಾತುಕತೆಗೆ ಬನ್ನಿ ಎಂದು ಹೇಳಿದ್ದೇನೆ.
ಮುಷ್ಕರ ವಾಪಸ್ ಪಡೆಯಿರಿ, ಕೋವಿಡ್ ಬಂದು ಸಾಕಷ್ಟು ಅನ್ಯಾಯವಾಗಿದೆ. ನಾನು ನಿಮ್ಮನ್ನು ಸಚಿವರ ಬಳಿ ಕಕೊರ್ಂಡು ಹೋಗ್ತೀನಿ ಈಗಿನಿಂದಲೇ ಬಸ್ ಸಂಚಾರ ಮಾಡಿ ನಾನು ಇರ್ತಿನಿ, ಸೆಂಟ್ರಲ್ ಕಮಿಟಿ ಇದೆ ಈ ಬಗ್ಗೆ ಮಾತುಕತೆಗೆ ನಾನು ಸಿಎಂ ಹಾಗೂ ಸಚಿವರ ಜೊತೆ ಮಾತುಕಥೆ ಮಾಡಿಸ್ತೀನಿ ಎಂದರು.
ಇದೇ ವೇಳೆ ಸಾರಿಗೆ ನೌಕರರನ್ನುದ್ದೇಶಿಸಿ ಮಾತನಾಡಿ, ನಾನು ಸಿಎಂ ಕಾಲು ಹಿಡಿದು ಸಮಸ್ಯೆ ಬಗೆಹರಿಸುತ್ತೇನೆ. ನೀವು ಸೇವೆಗೆ ಹಾಜರಾಗಿ, ನಾನು ನಿಮ್ಮ ಪರವಾಗಿ ಬೀದಿಗೆ ಇಳಿಯುತ್ತೇನೆ. ಬೇಕಾದ್ರೆ ಸರ್ಕಾರದ ವಿರುದ್ದವಾಗಿ ಹೋರಾಟ ಮಾಡ್ತಿನಿ ಎಂದು ಮನವಿ ಮಾಡಿಕೊಂಡರು.










