ಬೆಂಗಳೂರಲ್ಲಿ ಲಾಕ್ ಡೌನ್ ಬಗ್ಗೆ ಆರ್.ಅಶೋಕ್ ಸ್ಪಷ್ಟನೆ
ಬೆಂಗಳೂರು : ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಬೆಂಗಳೂರು ನಗರದಲ್ಲಿ ಲಾಕ್ ಡೌನ್ ಮಾಡ್ತಾರೆ ಅನ್ನೋ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಈ ಮಧ್ಯೆ ಈ ವಿಚಾರವಾಗಿ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಮೊದಲ ಲಾಕ್ ಡೌನ್ ನಿಂದಲೇ ಈಗಾಗಲೆ ತುಂಬಾ ಸಮಸ್ಯೆ ಆಗಿದೆ.
ಲಾಕ್ ಡೌನ್ ಹೊರತು ಪಡಿಸಿ ಬಿಗಿ ಕ್ರಮ ಜಾರಿ ಮಾಡಲಾಗುತ್ತದೆ. ಬೆಂಗಳೂರಿಗೆ ಲಾಕ್ ಡೌನ್ ಅವಶ್ಯಕತೆ ಇಲ್ಲ, ಸರ್ಕಾರದ ಮುಂದೆಯೂ ಲಾಕ್ ಡೌನ್ ಪ್ರಸ್ತಾವ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ನಾಳೆ ಬೆಂಗಳೂರಿನಲ್ಲಿ ಪ್ರತ್ಯೇಕ ಕಠಿಣ ನಿಯಮಗಳನ್ನ ಜಾರಿ ಮಾಡುತ್ತೇವೆ. ಕೊವೀಡ್ ತಜ್ಞರು ಟಫ್ ರೂಲ್ಸ್ ಮಾಡಿ ಎಂದಿದ್ದಾರೆ.
ಆದರೆ ಜನ ಸಾಮಾನ್ಯರ ಬದುಕು ನೋಡಬೇಕು, ಆ ದೃಷ್ಟಿಯಿಂದ ಟಫ್ ರೂಲ್ಸ್ ಇಂಪ್ಲಿಮೆಂಟ್ ಮಾಡೋ ಬಗ್ಗೆ ನಾಳೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ ಲಾಕ್ ಡೌನ್ ಬೇಡ ಅಂತಾ. ನಾಳೆ ಏನೇ ತೀರ್ಮಾನ ಆದ್ರೂ ಸಿಎಂ ಗಮನಕ್ಕೆ ತರ್ತೇನೆ ಎಂದು ಅಶೋಕ್ ಹೇಳಿದ್ದಾರೆ.










