ಕೊರೊನಾ ವೈರಸ್ ನಿಂದ ಬಿಕ್ಕಟ್ಟು ಸೃಷಿಯಾಗಿದೆ. ಸೋಂಕು ನಿಯಂತ್ರಣ ಮಾಡಲು ಲಾಕ್ ಡೌನ್ ಮಾಡಲಾಗಿದೆ. ಇದರಿಂದ ದೇಶ ಕಾರ್ಮಿಕರು ಸಾಕಷ್ಟು ತೊಂದರೆಯಲ್ಲಿ ಇದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕೊರೊನಾ ವೈರಸ್ ನಿಂದಾಗಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಲಾಕ್ ಡೌನ್ ಕಾರಣಕ್ಕಾಗಿ ವ್ಯಾಪಾರ, ವ್ಯವಹಾರಗಳು ಸ್ಥಗಿತಗೊಂಡಿವೆ. ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಲದೆ ಲಾಕ್ ಡೌನ್ ಆಗಿರುವ ಕಾರಣಕ್ಕೆ ಕಾರ್ಮಿಕರು ತಮ್ಮ ಮನೆಗಳಿಗೆ ಮರಳಲು ಹತಾಶರಾಗಿದ್ದಾರೆ. ಅವರಿಗೆ ಹೆಚ್ಚಿನ ಸಹಾಯದ ಅಗತ್ಯವಿದೆ.ನಮ್ಮ ಸಹೋದರ-ಸಹೋದರಿಯರನ್ನು ಮನೆಗೆ ಕರೆತರಲು ಸರ್ಕಾರವು ವಿಮಾನಯಾನಗಳನ್ನು ಆಯೋಜಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಕೈ ಪಾಳಯದಲ್ಲಿ ಬಂಗಲೆಗಾಗಿ ಬೀದಿ ರಂಪಾಟ: ಹಿರಿಯ ನಾಯಕ ಮಹದೇವಪ್ಪ ಮನೆಯಲ್ಲಿದ್ದಾಗಲೇ ಜೆಸಿಬಿ ನುಗ್ಗಿಸಿದ ಭೈರತಿ ಸುರೇಶ್-ಪಾಪ ಅವರಿಗೆ ತುಂಬಾ ಆತುರವಿರಬಹುದು ಎಂದ ಮಹದೇವಪ್ಪ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯುವುದು ಸಾಮಾನ್ಯ. ಆದರೆ ಈಗ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಭಾವಿ ನಾಯಕರ ನಡುವೆ ಸರ್ಕಾರಿ ಬಂಗಲೆಗಾಗಿ ಜಂಗೀ ಕುಸ್ತಿ...








