ನಾನು ಫೇಲಾಗಿದ್ದೇನೆ.. ನಮ್ಮ ಆರೋಗ್ಯ ವ್ಯವಸ್ಥೆಯೂ ಹಾಳಾಗಿದೆ… ಸೋನು ಸೂದ್
ಮುಂಬೈ: ಒಂದೆಡೆ ಮಹಾರಾಷ್ಟ್ರಗಳಲ್ಲಿ ಚಿತ್ರ ಮಂದಿರಗಳು, ಸಿನಿಮಾ ಚಿತ್ರೀಕರಣದ ಮೇಲೆ ಸರ್ಕಾರ ಕಠಿಣ ನಿರ್ಬಂಧ ಹೇರಿದ್ದು, ಕೊರೊನಾ ಹಾವಳಿ ಹೆಚ್ಚಾದ ಪರಿಣಾಮ ಬಾಲಿವುಡ್ ನಟ ನಟಿಯರು , ಜೋಡಿಗಳು ಮಹಾರಾಷ್ಟ್ರ ಬಿಟ್ಟು ಹೋಗ್ತಿದ್ದಾರೆ. ದೀಪಿಕಾ ಪಡುಕೋಣೆ – ರಣವೀರ್ ಸಿಂಗ್ , ಆಲಿಯಾ ಭಟ್ – ರಣಬೀರ್ ಕಪೂರ್ , ಟೈಗರ್ ಶ್ರಾಫ್ ದಿಶಾ ಪಟಾಣಿ ಸಹ ಮುಂಬೈ ತೊರೆದಿದ್ದಾರೆ.
ಇನ್ನೊಂದೆ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರೇ ಸಂಕಷ್ಟದಲ್ಲಿದ್ರೂ ಸಹ ನನ್ನಿಂದ ಜನರಿಗೆ ಸಹಾಯ ಮಾಡಲಿಕ್ಕೆ ಆಗುತ್ತಿಲ್ಲವಲ್ಲ ಎಂದು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಸೋನು ಸೂದ್ ಅನೇಕ ಬಡವರಿಗೆ ವಲಸೆ ಕಾರ್ಮಿಕರಿಗೆ ನೆರವಾಗಿ ರಿಯಲ್ ಹೀರೋ ಎನಿಸಿಕೊಂಡಿದ್ದು, ಇಲ್ಲಿವರೆಗೂ ಕಷ್ಟ ಎಂದವರ ಸಹಾಯಕ್ಕೆ ಮುಂದಿದ್ದಾರೆ. ಆದ್ರೆ ಇತ್ತೀಚೆಗೆ ಕೋವಿಡ್ ಎರಡನೇ ಅಲೆವೇಳೆ ಜನರಿಗೆ ಸಹಾಯ ಮಾಡಲು ಸಾಧ್ಯವಾಗದಿರುವ ಬಗ್ಗೆ ಸೋನು ಸೂದ್ ವಿಷಾದವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಆಸ್ಪತ್ರೆಯ ಹಾಸಿಗೆಗಳು ಮತ್ತು ಔಷಧಿಗಳನ್ನು ವ್ಯವಸ್ಥೆಗೊಳಿಸಲು ಸೂದ್ ತುಂಬಾ ಕಷ್ಟ ಪಡ್ತಿದ್ದಾರೆ. ನಾನು ವಿಫಲನಾನಗತಿದ್ದೇನೆ ಎಂದು ಟ್ವೀಟ್ ಮಾಡಿ ಬೇಸರ ಹೊರಹಾಕಿದ್ದಾರೆ. ಕೇಳಿದಷ್ಟು ಬೆಡ್ ಗಳಾಗಲಿ, ಚುಚ್ಚುಮದ್ದುಗಳನ್ನ ಒದಗಿಸಲು ಸಾಧ್ಯವಾಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ವಿಫಲವಾಗಿದ್ದೇನೆ, ನಮ್ಮ ಆರೋಗ್ಯ ವ್ಯವಸ್ಥೆಯೂ ವಿಫಲವಾಗಿದೆ ಎಂದು ಬೇಸರದಿಂದ ಸೋನು ಸೂದ್ ಟ್ವೀಟ್ ನಲ್ಲಿ ಮಾಡಿದ್ದಾರೆ. ಆದ್ರೆ ಇಂತಹ ಪರಿಸ್ಥಿತಿಯಲ್ಲೂ ಕೂಡ ಸೋನು ಅವರು ಜನರಿಗಾಗಿ ಕೈಲಾದ ಪ್ರಯತ್ನ ಮಾಡ್ತಿರುವುದಕ್ಕೆ ನೆಟ್ಟಿಗರು ಸೋನುಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








