ಉತ್ತರಪ್ರದೇಶ : 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನ ಕೊಂದು ಹಾಕಿದ್ದ ಪಾಪಿಯನ್ನ 54 ವರ್ಷದ ಪಾಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಇಂತಹ ಹೇಯ ಘಟನೆ ಅಪರಾಧಗಳ ಆಗರ ಉತ್ತರಪ್ರದೇಶದ ಕಾನ್ಪುರದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಸಂತ್ರಸ್ತ ಬಾಲಕಿಯ ಸಂಬಂಧಿಯಾಗಿದ್ದು, ಆಕೆಯನ್ನ ಪುಸಲಾಯಿಸಿ ತನ್ನ ಮನೆಗೆ ಕರೆದೊಯದ್ದು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಬಾಲಕಿಯ ಮೃತದೇಹವನ್ನ ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದ.
ಇತ್ತ ಬಾಲಕಿ ಕಾಣೆಯಾಗಿದ್ದ ಹಿನ್ನೆಲೆ ಗಾಬರಿಗೊಂಡು ಎಷ್ಟೇ ಹುಡುಕಾಡಿದ್ರೂ ಪತ್ತೆಯಾಗಲಿಲ್ಲ. ಹೀಗಾಗಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ವೇಳೆ ಆರೋಪಿಯ ಜೊತೆಗೆ ಬಾಲಕಿ ಹೋಗಿದ್ದ ಸುಳಿವು ಸಿಕ್ಕ ನಂತರ ಆತನ ಮನೆಯಲ್ಲಿ ಹುಡುಕಾಟ ನಡೆಸಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ.
ಮೃತದೇಹ ಪತ್ತೆಯಾಗ್ತಿದ್ದಂತೆ ಆರೋಪಿಗೆ ಸ್ಥಳೀಯರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರು ಆತನನ್ನ ಠಾಣೆಗೆ ಎಳೆದೊಯ್ದಿದ್ದಾರೆ. ಮಗುವಿನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ – ಕಾಮುಕನಿಗೆ 20 ವರ್ಷ ಜೈಲು ಶಿಕ್ಷೆ..!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ‘ ಕೊರೊನಾ ಪಾಸಿಟಿವ್’..!
BIGGBOSS 8 : ಮನೆಯಲ್ಲಿ ನೀರಿಲ್ಲಾ… ದಿನಸಿ ಇಲ್ಲಾ… ಎಲ್ಲಾ ಖಾಲಿ ಖಾಲಿ…!
BIGGBOSS 8 : ತಂತ್ರಗಾರಿಕೆ ಇರಬೇಕು, ಕುತಂತ್ರ ಅಲ್ಲ… ನಿಧಿ , ಮಂಜು , ದಿವ್ಯಾ ವಿರುದ್ಧ ಅರವಿಂದ್ ಫುಲ್ ಗರಂ..!