BIGGBOSS 8 : ಮನೆಯಲ್ಲಿ ನೀರಿಲ್ಲಾ… ದಿನಸಿ ಇಲ್ಲಾ… ಎಲ್ಲಾ ಖಾಲಿ ಖಾಲಿ…!
ಬೆಂಗಳೂರು : ದಿನೇ ದಿನೇ ಟಾಸ್ಕ್ ಗಳನ್ನ ಕಠಿಣಗೊಳಿಸುತ್ತಿರುವ ಬಿಗ್ ಬಾಸ್ ಕೊಡ್ತಿರುವ ಟ್ವಿಸ್ಟ್ ಗಳಿಂದ ಮನೆ ಮಂದಿ ಏನೇನೋ ಜುಗಾಡ್ ಗಳನ್ನ ಮಾಡ್ತಾರೆ. ಆದ್ರೆ ಈ ಬಾರಿ ಅವರು ಪಾತ್ರೆ ಸಾಮಾನುಗಳಿಗೆ, ದಿನಸಿಗಳಿಗೆ, ಅಷ್ಟೇ ಯಾಕೆ ನೀರಿಗಾಗಿಯೂ ಜುಗಾಡ್ ಮಾಡಬೇಕಾದ ಅನಿವಾರ್ಯತೆ ಅನ್ನುವಂತಹ ಪರಿಸ್ಥಿತಿಗೆ ಬಿಗ್ ಬಾಸ್ ಅವರನ್ನ ದೂಡಿದೆ.
ಹೌದು.. ಮನೆಯಲ್ಲಿ ಬಿಗ್ ಬಾಸ್ ಹೊಸ ಆಟವನ್ನು ಶುರು ಮಾಡಿದ್ದಾರೆ. ಬಿಗ್‍ಬಾಸ್ ಹೊಸ ಗೆಮ್ ಪ್ಲಾನ್ ಗೆ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ನೀರು ಬರುತ್ತಿಲ್ಲ, ಅಡುಗೆ ಮನೆಯ ದಿನಸಿಸಾಮಾಗ್ರಿಗಳಿಲ್ಲ. ಜಿಮ್ ಖಾಲಿ ಖಾಲಿ, ಬಾತ್‍ರೂಮ್ ಕ್ಲೋಸ್, ಬಿಗ್‍ಬಾಸ್ ಮನೆಯನ್ನೇ ಖಾಲಿ ಖಾಲಿ ಮಾಡಿದ್ದಾರೆ. ಇದನ್ನು ನೋಡಿದ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಏನೂ ಇಲ್ಲದೆ ಹೇಗೆ ಇರುವುದು ಎಂದು ಸ್ಪರ್ಧಿಗಳು ಯೋಚನೆ ಮಾಡುತ್ತಿದ್ದಾರೆ.
ಎಲ್ಲಾ ವಸ್ತುಗಳು ಮನೆಗೆ ತಿರುಗಿ ಪಡೆಯಬೇಕಾದರೆ ಬಿಗ್‍ಬಾಸ್ ನೀಡಿರುವ ಟಾಸ್ಕ್ ಗೆಲ್ಲುವ ಮೂಲಕವಾಗಿ ಅವುಗಳನ್ನು ಪಡೆದುಕೊಳ್ಳಬೇಕು. ವಿಫಲವಾದರೆ ಇಡೀ ವಾರ ಕೆಲವು ಸೌಲಭ್ಯಗಳು ಮನೆಯವರಿಗೆ ಸಿಗುವುದಿಲ್ಲ ಎಂದು ಬಿಗ್‍ಬಾಸ್ ಹೇಳಿದ್ದಾರೆ. ಇದ್ರಿಂದ ಮನೆಯ ಎಲ್ಲಾ ಸದಸ್ಯರ ಮುಖದ ಬಣ್ಣವೇ ಇಳಿದುಹೋಗಿದ್ದು, ಹೇಗೆ ಅಗತ್ಯ ಸೌಲಭ್ಯಗಳು ಸಿಗದೇ ಇರುವುದು ಎಂಬ ಯೋಚನೆ ಶುರುವಾಗಿಬಿಟ್ಟಿದೆ.
ನಾನು ಫೇಲಾಗಿದ್ದೇನೆ.. ನಮ್ಮ ಆರೋಗ್ಯ ವ್ಯವಸ್ಥೆಯೂ ಹಾಳಾಗಿದೆ… ಸೋನು ಸೂದ್
BIGGBOSS 8 : ತಂತ್ರಗಾರಿಕೆ ಇರಬೇಕು, ಕುತಂತ್ರ ಅಲ್ಲ… ನಿಧಿ , ಮಂಜು , ದಿವ್ಯಾ ವಿರುದ್ಧ ಅರವಿಂದ್ ಫುಲ್ ಗರಂ..!








