ಶಾಕಿಂಗ್ : ಭಾರತದಲ್ಲಿ ಕೊರೊನಾದ ಮತ್ತೊಂದು ಹೊಸ ಪ್ರಬೇಧದ ಜನನ..!
ನವದೆಹಲಿ : ದೇಶಾದ್ಯಂತ ಮೊದಲೇ ಜನರು ಕೊರೊನಾ 2ನೇ ಅಲೆಗೆ ತತ್ತರಿಸಿಹೋಗಿದ್ದಾರೆ. ಈ ನಡುವೆ ಬಾರತೀಯರಿಗೆ ಮತ್ತೊಂದು ಆಘಾತಕಾರಿ ವಿಚಾರ ತಿಳಿದುಬಂದಿದೆ. ಹೌದು ಬ್ರಿಟನ್ , ಸೌತ್ ಆಫ್ರೀಕಾ ಮಾದರಿಯಲ್ಲೇ ಇದೀಗ ಭಾರತದಲ್ಲಿ ಮತ್ತೊಂದು ಕೊರೊನಾ ಹೊಸ ಪ್ರಬೇಧವೇ ಪತ್ತೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಕೊರೊನಾದ ಹೊಸ ಪ್ರಭೇದ ಪತ್ತೆಯಾಗಿದ್ದು, ಬಿ.1.618 ಎಂದು ಈ ವೈರಸ್ ಗೆ ಹೆಸರಿಡಲಾಗಿದೆ. ರೂಪಾಂತರ ಕೊರೊನಾ ವೈರಸ್ ನಿಂದ ತತ್ತರಿಸುತ್ತಿರುವ ಭಾರತದಲ್ಲಿ ಈಗ ಈ ಹೊಸ ವೈರಸ್ ಇನ್ನಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ದಟ್ಟವಾಗಿದೆ.








