ತಜ್ಞರ ಸಲಹೆಯಂತೆ ಮೊದಲೇ ಕ್ರಮ ಕೈಗೊಂಡಿದಿದ್ದರೆ, ಪರಿಸ್ಥಿತಿ ನಿಯಂತ್ರಣದಲ್ಲಿರುತ್ತಿತ್ತು : ಡಾ.ಕೆ.ಸುಧಾಕರ್
ಬೆಂಗಳೂರು : ಕೊರೋನಾ ತಾಂತ್ರಿಕ ಸಮಿತಿ ನೀಡಿದ್ದ ಸಲಹೆಯಂತೆ ಈ ಮೊದಲೇ ನಾವು ಕ್ರಮಗಳನ್ನು ಕೈಗೊಂಡಿದಿದ್ದರೆ, ಪರಿಸ್ಥಿತಿ ನಿಯಂತ್ರಣದಲ್ಲಿರುತ್ತಿತ್ತು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಒಪ್ಪಿಕೊಂಡಿದ್ದಾರೆ.
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆರ್ಭಟಿಸುತ್ತಿದ್ದು, ಈ ನಡುವಲ್ಲೇ ಪರಿಸ್ಥಿತಿ ಎದುರಿಸುವಲ್ಲಿ ಸರ್ಕಾರ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂಬ ಟೀಕೆಗಳಿಗೆ ದಿ ನ್ಯೂ ಇಂಡಿಯನ್ ಎಕ್ಸ್’ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಉತ್ತರಿಸಿರುವ ಅವ್ರು, ಸದ್ಯದ ಪರಿಸ್ಥಿತಿಗೆ ಡಬಲ್ ಮ್ಯೂಟೆಂಟ್ ಎಂಬ ರೂಪಾಂತರಿ ಕೊರೋನಾ ವೈರಸ್ ಕಾರಣ. ಕೊರೋನಾ ತಾಂತ್ರಿಕ ಸಮಿತಿ ನೀಡಿದ್ದ ಸಲಹೆಯಂತೆ ಈ ಮೊದಲೇ ನಾವು ಕ್ರಮಗಳನ್ನು ಕೈಗೊಂಡಿದಿದ್ದರೆ, ಪರಿಸ್ಥಿತಿ ನಿಯಂತ್ರಣದಲ್ಲಿರುತ್ತಿತ್ತು ಎಂದು ಒಪ್ಪಿಕೊಂಡಿದ್ದಾರೆ.
ಇದಲ್ಲದೆ ಸದ್ಯ ರಾಜ್ಯದಲ್ಲಿ ಕೊರೋನಾ ಕೇಸ್ ಗಳ ಹೆಚ್ಚಳಕ್ಕೆ ಡಬಲ್ ಮ್ಯೂಟೆಂಟ್ ಎಂಬ ರೂಪಾಂತರಿ ಕೊರೋನಾ ವೈರಸ್ ವೇಗವಾಗಿ ಹರಡುತ್ತಿರುವುದು ಕಾರಣವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರ ಈ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.








