ಲಾಕ್ ಡೌನ್ ಬಗ್ಗೆ ನಾಳೆ ನಿರ್ಧಾರ : ಜಗದೀಶ್ ಶೆಟ್ಟರ್
ಧಾರವಾಡ : ವೀಕೆಂಡ್ ಕಫ್ರ್ಯೂಯಂತೆ ಉಳಿದ ದಿನಗಳಲ್ಲೂ ಕಫ್ರ್ಯೂ ಅಥವಾ ಲಾಕ್ ಡೌನ್ ಮಾಡುವ ಬಗ್ಗೆ ರಾಜ್ಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಈ ಬಗ್ಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು, ಸದ್ಯ ಮೇ 4ರ ವರೆಗೆ ಕಠಿಣ ನಿಯಮ ಜಾರಿಯಲ್ಲಿರುತ್ತದೆ.
ಮುಂದಿನ ವಾರವೂ ವೀಕೆಂಡ್ ಕಫ್ರ್ಯೂ ಇರುತ್ತದೆ. ಉಳಿದ ದಿನದ ಕಫ್ರ್ಯೂ, ಲಾಕ್ ಡೌನ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ನಾಳೆಯ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ವಿಸ್ತøತವಾಗಿ ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ನಾಳೆ ಲಾಕ್ ಡೌನ್ ಬಗ್ಗೆ ಚರ್ಚೆ ನಡೆಯುತ್ತದೆ.
ನಾಳೆ ಬೆಳಗ್ಗೆ 11ಕ್ಕೆ ಸಚಿವ ಸಂಪುಟ ಸಭೆ ಇದೆ. ಕ್ಯಾಬಿನೆಟ್ ನಲ್ಲಿ ಚರ್ಚಿಸಿದ ಬಳಿಕ ಸಿಎಂ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಠಿಣ ನಿಯಮಗಳಿಂದ ವ್ಯಾಪಾರಕ್ಕೆ ತೊಂದರೆ ಬಗ್ಗೆ ಪ್ರತಿಕ್ರಿಯೆ ನೀಡಿ, ಕಳೆದ ವರ್ಷ ಮೂರು ತಿಂಗಳು ಲಾಕ್ ಡೌನ್ ಆಗಿತ್ತು. ಈಗ ಕೇವಲ 8-10 ದಿನದ ಲಾಕ್ ಡೌನ್ ಅಷ್ಟೇ ಇದೆ ಎಂದರು.









