ಕಿಂಗ್ ಕೊಹ್ಲಿಯನ್ನ ಹಿಂದಿಕ್ಕಿ ವಿಶ್ವದಾಖಲೆ ಬರೆದ ಬಾಬರ್
ಹರಾರೆ : ರೆಡ್ ಹಾರ್ಸ್ ಪಾರ್ಮ್ ನಲ್ಲಿ ಮುನ್ನುಗ್ಗುತ್ತಿರುವ ಪಾಕ್ ತಂಡದ ನಾಯಕ ಬಾಬರ್ ಅಜಮ್ ಅವರು ಕಿಂಗ್ ಕೊಹ್ಲಿ ಅವರನ್ನ ಹಿಂದಿಕ್ಕೆ ಟಿ 20ಯಲ್ಲಿ ವಿಶ್ವಾದಾಖಲೆ ಬರೆದಿದ್ದಾರೆ.
ಜಿಂಬಾಬ್ವೆ ವಿರುದ್ಧದ ಕೊನೆ ಟಿ20 ಪಂದ್ಯದ ವೇಳೆ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಬಾಬರ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವೇಗವಾಗಿ 2000 ರನ್ ಬಾರಿಸಿರುವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಟಿ 20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬಾಬರ್ 52 ಇನ್ನಿಂಗ್ಸ್ ಗಳಲ್ಲಿ 2000 ರನ್ ಪೂರೈಸಿದ್ದಾರೆ. ವಿರಾಟ್ ಕೊಹ್ಲಿ ಇದೇ ದಾಖಲೆಯನ್ನು 56 ಇನ್ನಿಂಗ್ಸ್ ಗಳಲ್ಲಿ ಪೂರೈಸಿದ್ದರು.
ಇನ್ನುಳಿದಂತೆ 2000 ರನ್ ಪೂರೈಸಲು ಆಸ್ಟ್ರೇಲಿಯಾದ ನಾಯಕ ಆರೋನ್ ಫಿಂಚ್ 62 ಇನ್ನಿಂಗ್ಸ್ ಗಳನ್ನ ತೆಗೆದುಕೊಂಡಿದ್ದರೇ, ಬ್ರೆಂಡನ್ ಮೆಕಲಮ್ (66), ಕಿವೀಸ್ ನ ಮಾರ್ಟಿನ್ ಗಪ್ಟಿಲ್ (68) ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.










