ಉತ್ತರಖಂಡದಲ್ಲಿ ಮತ್ತೆ ಹಿಮಕುಸಿತ – ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಉತ್ತರಖಂಡ: ್ತರಾಖಂಡದ ಚಮೋಲಿ ರುವ ಭಾರತ-ಚೀನಾ ಗಡಿ ಸಮೀಪ ಮತ್ತೆ ಹಿಮಕುಸಿತವಾಗಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೇರಿಕೆಯಾಗಿದೆ. ಶನಿವಾರದ ವೇಳೆಗೆ 10 ಮೃತದೇಹಗಳನ್ನು ಪತ್ತೆ ಮಾಡಲಾಗಿತ್ತು. ಭಾನುವಾರ ಮತ್ತೊಂದು ಶವ ಸಿಕ್ಕಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಶುಕ್ರವಾರ ಹಿಮಪಾತ ಸಂಭವಿಸಿದಾಗ 430 ಬಾರ್ಡರ್ರೋಡ್ಆರ್ಗನೈಜೇಶನ್(ಬಿಆರ್ಒ) ಕಾರ್ಮಿಕರು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು ಎಂದು ಉತ್ತರಾಖಂಡದ ಪೊಲೀಸ್ಮುಖ್ಯಸ್ಥ ಅಶೋಕ್ಕುಮಾರ್ಅವರು ತಿಳಿಸಿದ್ದಾರೆ.
ಸ್ಥಳಕ್ಕೆ ಚಮೋಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ಸ್ವಾತಿ ಎಸ್.ಭಧೌರಿಯಾ ಮತ್ತು ಪೊಲೀಸ್ವರಿಷ್ಠಾಧಿಕಾರಿ ಯಶವಂತ್ಸಿಂಗ್ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸುಮಾರು 2 ತಿಂಗಳ ಹಿಂದಷ್ಟೇ ಉತ್ತರಖಂಡದ ಚಮೋಲಿಯಲ್ಲಿ ಹಿಮಕುಸಿತವಾಗಿ ನೂರಾರು ಮಮದಿ ನಾಪತ್ತೆಯಾಗಿದ್ದರು 80 ಕ್ಕೂ ಅಧಿಕ ಮಂದಿ ಜೀವ ಕಳೆದುಕೊಮಡಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಮತ್ತೆ ಅಂತಹದ್ದೇ ಪ್ರಕರಂ ನಡೆದು ಜನರನ್ನ ಆಘಾತಕ್ಕೀಡು ಮಾಡಿದೆ.








