ADVERTISEMENT
Saturday, August 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೋವಿಡ್ ಪಾಸಿಟಿವ್ ಆದ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕಿಲ್ಲ, ಮನೆ ಆರೈಕೆಗೆ ಸರ್ಕಾರದಿಂದ ಮಾರ್ಗದರ್ಶನ: ಸುಧಾಕರ್

Namratha Rao by Namratha Rao
April 26, 2021
in Newsbeat, State, ರಾಜ್ಯ
sudhakar
Share on FacebookShare on TwitterShare on WhatsappShare on Telegram

ಕೋವಿಡ್ ಪಾಸಿಟಿವ್ ಆದ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕಿಲ್ಲ, ಮನೆ ಆರೈಕೆಗೆ ಸರ್ಕಾರದಿಂದ ಮಾರ್ಗದರ್ಶನ: ಸುಧಾಕರ್

ಕೋವಿಡ್ ಲಸಿಕೆಗೆ 400 ಕೋಟಿ ರೂ.ಗೆ ಅನುಮೋದನೆ

Related posts

ಯುಪಿಐ ವಹಿವಾಟು ಇನ್ಮುಂದೆ ಫ್ರೀ ಅಲ್ವಾ ಕಾಂಗ್ರೆಸ್ ಆರೋಪಕ್ಕೆ ಮೋದಿ ಸರ್ಕಾರದ ಖಡಕ್ ಉತ್ತರ

ಯುಪಿಐ ವಹಿವಾಟು ಇನ್ಮುಂದೆ ಫ್ರೀ ಅಲ್ವಾ ಕಾಂಗ್ರೆಸ್ ಆರೋಪಕ್ಕೆ ಮೋದಿ ಸರ್ಕಾರದ ಖಡಕ್ ಉತ್ತರ

August 8, 2026
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

August 8, 2026

ಬೆಂಗಳೂರು :  ಕೋವಿಡ್ ಸೋಂಕಿಗೊಳಗಾದವರೆಲ್ಲರೂ ಆಸ್ಪತ್ರೆಗೆ ದಾಖಲಾಗಬೇಕಿಲ್ಲ. ಕಡಿಮೆ ಲಕ್ಷಣ ಇರುವವರು ಮನೆಯಲ್ಲೇ ಆರೈಕೆ ಪಡೆಯಬಹುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮನೆ ಆರೈಕೆಯಲ್ಲಿರುವವರಿಗೆ ಪ್ರತಿ ದಿನ ಕಾಲ್ ಸೆಂಟರ್ ನಿಂದ ಕರೆ ಮಾಡಿ ಮಾರ್ಗದರ್ಶನ ನೀಡಲಾಗುತ್ತದೆ. ಜೊತೆಗೆ ಔಷಧಿ ಕಿಟ್ ನೀಡಲಾಗುತ್ತದೆ. ಯು.ಕೆ.ಯಲ್ಲಿ ರೋಗಿಗಳನ್ನು ಮನೆಯಲ್ಲೇ ಇರಿಸಿ ಆಸ್ಪತ್ರೆ ಮೇಲೆ ಒತ್ತಡವಿಲ್ಲದಂತೆ ಮಾಡಿ ಸಾವಿನ ಪ್ರಮಾಣ ಕಡಿಮೆ ಮಾಡಲಾಗಿದೆ. ಇದೇ ರೀತಿ ರಾಜ್ಯದಲ್ಲೂ ಮಾಡಲಾಗುವುದು. ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಎಲ್ಲರಿಗೂ ಕರೆ ಮಾಡಲು ಸಿಬ್ಬಂದಿ ಬೇಕಾಗುತ್ತದೆ. ಇದಕ್ಕಾಗಿ ಸಿಐಐ ಸಹಯೋಗ ಪಡೆಯಲಾಗಿದೆ ಎಂದರು.

ಕೋವಿಡ್ ಸಂಬಂಧಿತ ಕೆಲ ಔಷಧಿಗಳಿಗೆ 81.32 ಕೋಟಿ ರೂ., ಲಸಿಕೆಗೆ 400 ಕೋಟಿ ರೂ., ರೆಮಿಡಿಸಿವಿರ್ ಗೆ 28 ಕೋಟಿ ರೂ. ಮಂಜೂರು ಮಾಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆತಿದೆ. ವಿಕ್ಟೋರಿಯಾ, ಬೌರಿಂಗ್ ನಲ್ಲಿ 250 ಹಾಸಿಗೆಗಳಿಗೆ ವೆಂಟಿಲೇಟರ್ ಅಳವಡಿಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ 3 ಸಾವಿರ ಹಾಸಿಗೆಯ ಮೇಕ್ ಶಿಫ್ಟ್ ಆಸ್ಪತ್ರೆ ಬರಲಿದೆ. ಪೋರ್ಟೇಬಲ್ ಆಕ್ಸಿಜನ್ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿವೆ. ಕೆಲ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸೆ ಮುಗಿದ ಕೂಡಲೇ ಉಳಿದ ಹಾಸಿಗೆ ದೊರೆಯಲಿದೆ. ಯಾವುದೇ ಸರಳ ರೀತಿಯ ಚಿಕಿತ್ಸೆ ಯಾವುದೇ ವೈದ್ಯ ಪದ್ಧತಿಯಲ್ಲಿದ್ದರೂ ಅದನ್ನು ಉತ್ತೇಜಿಸಲಾಗುವುದು. ಆಯುಷ್ ನಲ್ಲಿ ಔಷಧಿ, ಚಿಕಿತ್ಸೆ ಇದ್ದರೂ ಬೆಂಬಲಿಸಲಾಗುವುದು ಎಂದರು.

ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ

ಇದಕ್ಕೂ ಮುನ್ನ ಖಾಸಗಿ ಆಸ್ಪತ್ರೆಗಳ ಪ್ರಮುಖರೊಂದಿಗೆ ಸಚಿವರು ಸಭೆ ನಡೆಸಿದರು. ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಕಳೆದ ವರ್ಷಕ್ಕಿಂತ ಕಡಿಮೆ ಹಾಸಿಗೆಗಳನ್ನು ಮೀಸಲಿಟ್ಟಿವೆ. ಈಗ ಕೋವಿಡ್ ಪಾಸಿಟಿವ್ ಆದವರೆಲ್ಲ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಆದ್ದರಿಂದ ನಾನ್ ಕೋವಿಡ್ ಬಿಟ್ಟು ಕೋವಿಡ್ ಗೆ ಒತ್ತು ನೀಡುವುದು ಅನಿವಾರ್ಯ ಎಂದರು.

ಖಾಸಗಿ ಆಸ್ಪತ್ರೆಗಳು 75% ಹಾಸಿಗೆಗಳನ್ನು ಸರ್ಕಾರಕ್ಕೆ ನೀಡಬೇಕು. ಈ ಪೂರ್ತಿ ಹಾಸಿಗೆಗಳು ಸರ್ಕಾರಕ್ಕೆ ಸಲ್ಲಬೇಕು. ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ನಿಂದ ಇದಕ್ಕೆ ಪಾವತಿ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.

ಸಚಿವರು ಹೇಳಿದ ಇತರೆ ಅಂಶಗಳು

ಅಗತ್ಯ ಸೇವೆಗಳಿಗೆ ಯಾವುದೇ ಅಡ್ಡಿ ಮಾಡುವುದಿಲ್ಲ. ಆಸ್ಪತ್ರೆಗೆ ಹೋಗಲು, ಲಸಿಕೆ ಪಡೆಯಲು ಹೋಗುವವರಿಗೆ ಯಾರೂ ಅಡ್ಡಿ ಮಾಡುವುದಿಲ್ಲ.

14 ದಿನ ಕಡ್ಡಾಯವಾಗಿ ದೂರ ಇದ್ದು, ಕೊರೊನಾ ಚೈನ್ ಅನ್ನು ಮುರಿಯಬೇಕು. ಪಾಸಿಟಿವ್ ಆದ ಕೂಡಲೇ ಮನೆಯವರೊಂದಿಗೂ ಬೆರೆಯಬಾರದು.

ಮೇ 1 ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬಹುದು. ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗುವುದು.

Tags: Covid19Dr. K Sudhakarhealth ministerkarnataka
ShareTweetSendShare
Join us on:

Related Posts

ಯುಪಿಐ ವಹಿವಾಟು ಇನ್ಮುಂದೆ ಫ್ರೀ ಅಲ್ವಾ ಕಾಂಗ್ರೆಸ್ ಆರೋಪಕ್ಕೆ ಮೋದಿ ಸರ್ಕಾರದ ಖಡಕ್ ಉತ್ತರ

ಯುಪಿಐ ವಹಿವಾಟು ಇನ್ಮುಂದೆ ಫ್ರೀ ಅಲ್ವಾ ಕಾಂಗ್ರೆಸ್ ಆರೋಪಕ್ಕೆ ಮೋದಿ ಸರ್ಕಾರದ ಖಡಕ್ ಉತ್ತರ

by Shwetha
August 8, 2026
0

ನವದೆಹಲಿ: ದೇಶದ ಜನಪ್ರಿಯ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ ಬಳಕೆದಾರರಲ್ಲಿ ಮನೆ ಮಾಡಿದ್ದ ಶುಲ್ಕದ ಆತಂಕಕ್ಕೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಯುಪಿಐ ವಹಿವಾಟಿನ ಮೇಲೆ ಮರ್ಚೆಂಟ್...

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

by Shwetha
August 8, 2026
0

ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಸಭಾಪತಿ ಸ್ಥಾನದಲ್ಲಿ ಮುಂದುವರಿಯಲು ನಡೆಸಿದ ಕೊನೆಯ ಹಂತದ...

ಮಗನ ಪಟ್ಟಾಭಿಷೇಕಕ್ಕಾಗಿ ಹಿರಿಯ ನಾಯಕರ ರಾಜಕೀಯ ಜೀವನ ಬಲಿ: ಕರ್ನಾಟಕದ ರಾಜಕೀಯ ಹೊಲಸು ಮಾಡಿದ್ದೇ ಸಿದ್ದರಾಮಯ್ಯ- ಪ್ರತಾಪ ಸಿಂಹ

ಮಗನ ಪಟ್ಟಾಭಿಷೇಕಕ್ಕಾಗಿ ಹಿರಿಯ ನಾಯಕರ ರಾಜಕೀಯ ಜೀವನ ಬಲಿ: ಕರ್ನಾಟಕದ ರಾಜಕೀಯ ಹೊಲಸು ಮಾಡಿದ್ದೇ ಸಿದ್ದರಾಮಯ್ಯ- ಪ್ರತಾಪ ಸಿಂಹ

by Shwetha
August 8, 2026
0

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಡಾ ಯತೀಂದ್ರ ಅವರನ್ನು ರಾಜಕೀಯ ನಾಯಕನನ್ನಾಗಿ ರೂಪಿಸಲು ಮೈಸೂರು ಭಾಗದ ಹಿರಿಯ ಕಾಂಗ್ರೆಸ್ ನಾಯಕರ ರಾಜಕೀಯ ಭವಿಷ್ಯವನ್ನೇ...

ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (08-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 8, 2026
0

ದಿನ ಭವಿಷ್ಯ: 08-08-2026 ಮೇಷ ರಾಶಿ ಸಾಮಾನ್ಯ ಫಲ: ಇಂದಿನ ದಿನ ನಿಮಗೆ ಕಠಿಣ ಶ್ರಮದ ಅಗತ್ಯವಿದೆ. ಕೈಗೊಂಡ ಕಾರ್ಯಗಳಲ್ಲಿ ಸಣ್ಣ ಪುಟ್ಟ ವಿಳಂಬವಾದರೂ ಅಂತಿಮ ಜಯ...

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

by admin
August 7, 2026
0

    ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram