‘ಬಣ್ಣದ ಜಗತ್ತೂ ಬೇಡ…. ರಾಜಕೀಯವೂ ಬೇಡ’… ! ಶಾಶ್ವತವಾಗಿ ಗುಡ್ ಬೈ ಹೇಳಿದ ಮೋಹಕತಾರೆ ರಮ್ಯಾ..!
ಮೋಹಕತಾರೆ ರಮ್ಯಾ ಸಿನಿಮಾರಂಗ ಬಿಟ್ಟು ಬಹಳ ವರ್ಷಗಳೇ ಕಳೆದುಹೋಗಿವೆ. 2014 ರಲ್ಲಿ ಶಿವರಾಜ್ ಕುಮಾರ್ ಅಭಿನಯದ ಆರ್ಯನ್ ಸಿನಿಮಾದಲ್ಲಿ ಕೊನೆಯದಾಗಿ ರಮ್ಯಾ ಕಾಣಿಸಿಕೊಂಡಿದ್ದರು. ಅದಾದ ನಂತರ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಈಗ ರಾಜಕೀಯದಿಂದಲೂ ದೂರವೇ ಇದ್ದಾರೆ. ಆದ್ರೆ ಎಲ್ಲೋ ಒಂದು ಕಡೆ ಅವರ ಅಭಿಮಾನಿಗಳಿಗೆ ಒಂದು ಹೋಪ್ ಇತ್ತು. ಇಂದಲ್ಲಾ ನಾಳೆ ರಮ್ಯಾ ಮತ್ತೆ ಬೆಳ್ಳಿ ಪರದೆ ಮೇಲೆ ಬರುತ್ತಾರೆ ಅಂತ ಆದ್ರೆ ಆ ವಿಶ್ವಾಸಕ್ಕೆ ಖುದ್ದು ರಮ್ಯಾ ತಣ್ಣೀರೆರೆಚಿದ್ದಾರೆ. 
ಹೌದು… ರಾಮ್ಯಾ ರಾಜಕೀಯ ಹಾಗೂ ಸಿನಿಮರಾಂಗ ಎರೆಡಕ್ಕೂ ಗುಡ್ ಬೈ ಹೇಳಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುವ ವೇಳೆ ರಮ್ಯಾ ಆಡಿರುವ ಮಾತುಗಳನ್ನ ನೋಡಿದ್ರೆ ಅವರು ಇವರೆಡರಿಂದಲೂ ಶಾಶ್ವತವಾಗಿ ದೂರವಾಗಿರುವುದು ಗೊತ್ತಾಗುತ್ತಿದೆ. ನಟನೆ ಅನ್ನೋ ನನ್ನ ಹಡಗು ಮುಳುಗಿ ಬಹಳ ವರ್ಷವಾಗಿದೆ. ನನಗೆ ನಟಿಸಲು ಆಸಕ್ತಿಯೂ ಇಲ್ಲ. ರಾಜಕೀಯದಲ್ಲಿಯೂ ನನ್ನ ಟೈಂ ಮುಗೀತು ಎಂದು ರಮ್ಯಾ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಇದೇ ವೇಳೆ ರಮ್ಯಾ ಮದುವೆಯ ವಿಚಾರವಾಗಿಯೂ ಸವಾಲುಗಳು ಬಂದಿದೆ. ಇದ್ರಲ್ಲಿ ಫನ್ನಿಯಾಗಿದ್ದಿದ್ದು ಅಂದ್ರೆ ಅಭಿಮಾನಿಯೊಬ್ಬರು ‘ಮೇಡಂ ನೀವು ರಕ್ಷಿತ್ ಶೆಟ್ಟಿ ಮದುವೆಯಾಗಿ ಎಂದು ಸಲಹೆ ಕೊಟ್ಟಿದ್ದರು. ಇದಕ್ಕೆ ತಮಾಷೆಯಾಗಿಯೇ ಉತ್ತರಿಸಿರುವ ರಮ್ಯಾ ರಕ್ಷಿತ್ ಶೆಟ್ಟಿ ಅವರ ಇನ್ಸ್ಟಾ ಖಾತೆಯನ್ನು ಟ್ಯಾಗ್ ಮಾಡಿ ಫನ್ನಿ ಇಮೋಜಿ ಹಾಕಿದ್ದಾರೆ.








