ಬಾಲಿವುಡ್ ನ 3ನೇ ಸಿನಿಮಾಗೆ ಸಹಿ ಹಾಕಲಿರುವ ‘ಕಿರಿಕ್ ರಾಣಿ’..!
ಕನ್ನಡದ ‘ಕಿರಿಕ್ ರಾಣಿ’ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿಯೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಆಫರ್ ಗಳು ಅವರ ಕೈಲಿವೆ. ಟಾಲಿವುಡ್ , ತಮಿಳು ಸಿನಿಮಾಗಳಲ್ಲಿ ಮಿಂಚಿ ಬಾಲಿವುಡ್ ಗೆ ಕಾಲಿಟ್ಟಿದ್ದ ರಶ್ಮಿಕಾ ಈಗಾಗಲೇ 2 ಸಿನಿಮಾಗಳಿಗೆ ಸಹಿ ಹಾಕಿದ್ದರು. ಮಿಷನ್ ಮಜ್ನು ಶೂಟಿಂಗ್ ಮುಗಿಸಿ , ಅಮಿತ್ ಬಚ್ಚನ್ ಅವರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾಗಲೇ ಕೊರೊನಾ ಹಾವಳಿಯಿಂದಾಗಿ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಇದೀಗ ಬಾಲಿವುಡ್ ನ 3ನೇ ಸಿನಿಮಾಗೆ ರಶ್ಮಿಕಾ ಸಹಿ ಹಾಕಲು ಮುಂದಾಗಿದ್ದಾರೆ. ಈ ಬಗ್ಗೆ ಖುದ್ದು ರಶ್ಮಿಕಾ ಅಭಿಮಾನಿಗಳ ಮುಂದೆ ರಿವೀಲ್ ಮಾಡಿದ್ದಾರೆ. ಹೈದ್ರಬಾದ್ ನಲ್ಲಿ ಠಿಕಾಣೆ ಹೂಡಿರುವ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದ ವೇಳೆ ರಶ್ಮಿಕಾ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಬಾಲಿವುಡ್ ಸಿನಿಮಾಗಳ ಬಗ್ಗೆ ಮಾತನಾಡಿ ಸದ್ಯದಲ್ಲೇ 3ನೇ ಸಿನಿಮಾಗೆ ಸಹಿ ಮಾಡುವುದಾಗಿ ಹೇಳಿದ್ದಾರೆ.







