2 ಕೆ. ಜಿ ಅಕ್ಕಿ ಕೊಡ್ತಿದ್ದಾರೆ ನಾಚಿಕೆಯಾಗಬೇಕು ಇವರಿಗೆ – ಡಿಕೆಶಿ ಆಕ್ರೋಶ
ಕೊರೊನ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಜನರ ಕಷ್ಟಕ್ಕೆ ನಾವು ಸ್ಪಂದಿಸಿ ಬೇಕು. ಇದು ಆರೋಗ್ಯ ವಿಚಾರ ಈ ಸಮಯದಲ್ಲಿ ಜನರ ಜೊತೆಗೆ ಇರಬೇಕು. ಈಗ ಹೋರಾಟ ಮುಖ್ಯವಲ್ಲ ಆ ಬಗ್ಗೆ ಚರ್ಚೆ ಇಲ್ಲ ಎಂದು ಡಿಕೆಶಿವಕುಮಾರ್ ಅವರು ಹೇಳಿದ್ದಾರೆ.
ಇದೇ ವೇಳೆ ಹಿರಿಯ ಕಾಂಗ್ರೆಸ್ ನಾಯಕರ ಜತೆ ಚರ್ಚೆ ಮಾಡಿದ್ದೇವೆ.. ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಕರೋನ ಸಮಯದಲ್ಲಿ ಕಾಂಗ್ರೆಸ್ ಜವಾಬ್ದಾರಿ ಬಗ್ಗೆ ಸಲಹೆ ಕೊಟ್ಟಿದ್ದಾರೆ.. ಆಸ್ಪತ್ರೆಗಳಿಂದ ಯಾವ ರೀತಿ ಮಾಹಿತಿ ಪಡೆಯಬೇಕು.. ಜನರಿಗೆ ಯಾವ ರೀತಿ ಮಾಹಿತಿ ಕೊಡಬೇಕು.. ಮನಮೋಹನ್ ಸಿಂಗ್ ಕೊಟ್ಟ ಸಲಹೆ ಬಗ್ಗೆ ಮಾಹಿತಿ ನೀಡಿದ್ದಾರೆ..ಹಿರಿಯ ಕಾಂಗ್ರೆಸ್ ನಾಯಕರು ಹಲವು ಸಲಹೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇದೇ ವೇಳೆ 24*7 ಜನರಿಗೆ ಸಹಾಯ ಮಾಡಲು ಸಹಾಯವಾಣಿ ಮಾಡ್ತೀವಿ..ಕಾಂಗ್ರೆಸ್ ಪಕ್ಷದಿಂದ ಸಹಾಯ ಮಾಡಲು ಸೂಚಿಸಿದ್ದಾರೆ.. ಲಾಕ್ಡೌನ್ ಇಂದ ಸಮಸ್ಯೆ ಆಗ್ತಿರುವ ಕುಟುಂಬಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿ..ಕೂಡಲೇ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಬೇಕು.
ಎರಡು ಕೆಜಿ ಅಕ್ಕಿ ಕೊಡ್ತಿರುವ ಸರ್ಕಾರಕ್ಕೆ ನಾಚಿಕೆ ಆಗಬೇಕು.. ಏಳು ಕೆಜಿ ಇಂದ ಎರಡು ಕೆಜಿ ಅಕ್ಕಿ ಕೊಡಲು ಮುಂದಾಗಿದ್ದಾರೆ. ಇವರೇನು ಮನೆಯಿಂದ ಅಕ್ಕಿ ಕೊಡಲ್ಲ.. ಕೂಡಲೇ ಸರ್ಕಾರ ತಪ್ಪು ತಿದ್ದಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.








