ಉತ್ತರಖಾಂಡ್ ಸಿಎಂ ಮೂರ್ಖ ಅಂತಾ ಕಾಣಿಸುತ್ತೆ – ಸಿದ್ದರಾಮಯ್ಯ
ನಾನು ಚುನಾವಣೆಗೆ ಹೋಗಿದ್ದೆ. ಅವರು ಚುನಾವಣೆ ಮಾಡಿದ್ದರಿಂದ ನಾವು ಹೋಗ ಬೇಕಾಯ್ತು. ಇಲ್ಲ ಅಂದ್ರೆ ನಾನು ಏಕೆ ಹೋಗ್ತಾ ಇದ್ದೆ. ರಾಜ್ಯ ಸರ್ಕಾರ ಚುನಾವಣೆಗೆ 200 ಜನ ಸೇರಬಾರದು ಅಂತಾ ಆದೇಶ ಮಾಡಿತ್ತು. ಯಡಿಯೂರಪ್ಪ ಮಸ್ಕಿಗೆ ಹೋಗಬೇಕು ಅಂತಾ ರಿಲಿಸ್ ಮಾಡಿಬಿಟ್ರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ಧಾರೆ.
ಇದೇ ವೇಳೆ ಉತ್ತರಖಾಂಡ್ ಸಿಎಂ ಮೂರ್ಖ ಅಂತಾ ಕಾಣಿಸುತ್ತೆ. ಅವರು ಗಂಗಾ ಮಾತೆ ಆಶೀರ್ವಾದ ಇದೆ . ಕೊರೋನಾ ಬರೋಲ್ಲ ಎಂದಿದ್ದರು. ಪ್ರಧಾನಿ ಕುಂಭ ಮೇಳಕ್ಕೆ ಹೃತ್ಪೂರ್ವಕ ಸ್ವಾಗತ ಅಂತಾರೆ. ಅಸ್ಸಾಂ ಆರೋಗ್ಯ ಸಚಿವ ಆಸ್ಸಾಂ ಅಲ್ಲಿ ಮಾಸ್ಕ್ ಬೇಡ ಅಂದರು. ಕುಂಭ ಮೇಳ ಮಾಡೋಕೆ ಏಕೆ ಬಿಟ್ರು ಎಂದು ಬಿಜೆಪಿ ಸರ್ಕಾರಗಳ ಕಾರ್ಯ ವೈಖರಿಯನ್ನ ಖಂಡಿಸಿದ್ದಾರೆ.








