ಶವಸಂಸ್ಕಾರಕ್ಕೂ ಹಣ ಕೊಡಬೇಕು – ಸಿದ್ದರಾಮಯ್ಯ
ಬೆಂಗಳೂರು : ಶವಸಂಸ್ಕಾರಕ್ಕೂ ಹಣ ಕೊಡಬೇಕು. ಔಷಧ ಬ್ಲಾಕ್ ಮಾರುಕಟ್ಟೆಯಲ್ಲಿ ಮಾರಾಟ ಆಗ್ತಾ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸರ್ಕಾರ ಏನು ಮಾಡ್ತಾ ಇದೆ. ಜನ ಕೂಡ ತಮ್ಮ ಜವಾಬ್ದಾರಿ ನಿರ್ವಹಿಸ ಬೇಕು. ಸರ್ಕಾರವನ್ನೇ ನಂಬಲು ಸಾಧ್ಯವಿಲ್ಲ. ಮನೆಲ್ಲಿದ್ದರು ಮಾಸ್ಕ್ ಹಾಕಿಕೊಳ್ಳ ಬೇಕು . ರೋಗ ಕೇವಲ ಸರ್ಕಾರ ನಿಯಂತ್ರಣ ಮಾಡ್ತಾದೆ ಅಂತಾ ಹೇಳೋಕೆ ಆಗೊಲ್ಲ. ನಾನು ಗುಂಪಿಗೆ ಹೋಗಲ್ಲ. ಮಾಸ್ಕ್ ಸ್ಯಾನಿಟೈಸ್ ಯೂಸ್ ಮಾಡ್ತಿನಿ ಅಂತಾ ನಿರ್ಧರಿಸ ಬೇಕು ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರುತ್ತಾ ಜನರಿಗೆ ಸಲಹೆ ನೀಡಿದ್ದಾರೆ.
ಇದೇ ವೇಳೆ ಸರ್ಕಾರ ನೀಡುತ್ತಿರುವ ಸಾವಿನ ಸಂಖ್ಯೆ ಒಂದು. ಆದರೆ ಸ್ಮಶಾನದಲ್ಲಿ ಕೊಡುವ ಸಂಖ್ಯೆಗೂ ವ್ಯತ್ಯಾಸ ಇದೆ. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಕೂಡ ಸರಿಯಾಗಿ ನೀಡುತ್ತಿಲ್ಲ. ಸಾವಿನ ಸಂಖ್ಯೆಯೂ ಸರಿಯಾಗಿ ನೀಡ್ತಾ ಇಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.








