ಮೋದೀಜಿಗೆ ದೇಶ ಮುನ್ನಡೆಸಲು ತಿಳಿದಿಲ್ಲ.. ಸಚಿನ್‌ಗೆ ಬ್ಯಾಟಿಂಗ್ ಮಾಡಲು ತಿಳಿದಿಲ್ಲ.. – ನೆಟ್ಟಿಗರಿಗೆ ಕಂಗನಾ ತಿರುಗೇಟು
ಪ್ರಧಾನಿ ನರೇಂದ್ರ ಮೋದಿಯವರ ರಾಜೀನಾಮೆಗೆ ಒತ್ತಾಯಿಸಿ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗುತ್ತಿರುವ ಹ್ಯಾಶ್‌ಟ್ಯಾಗ್ ಬಳಸಿದ ಟ್ರೋಲ್‌ಗಳನ್ನು ಮಂಗಳವಾರ ನಟಿ ಕಂಗನಾ ರಣಾವತ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೋದಿ ಜಿ ಅವರಿಗೆ ದೇಶವನ್ನು ಹೇಗೆ ಮುನ್ನಡೆಸಬೇಕೆಂದು ತಿಳಿದಿಲ್ಲ, ಕಂಗನಾ ಅವರಿಗೆ ಹೇಗೆ ನಟಿಸಬೇಕು ಎಂದು ತಿಳಿದಿಲ್ಲ, ಸಚಿನ್‌ಗೆ ಹೇಗೆ ಬ್ಯಾಟಿಂಗ್ ಮಾಡಬೇಕು ಎಂದು ಗೊತ್ತಿಲ್ಲ, ಲತಾ ಜಿ ಅವರಿಗೆ ಹಾಡಲು ಗೊತ್ತಿಲ್ಲ, ಆದರೆ ಈ ಚಿಂದಿ ರಾಕ್ಷಸರು ಎಲ್ಲವನ್ನೂ ತಿಳಿದಿದ್ದಾರೆ. ದಯವಿಟ್ಟು #Resign_PM_Modi ji ಮತ್ತು ಈ ವಿಷ್ಣು ಅವತಾರ ಟ್ರೋಲ್‌ಗಳಲ್ಲಿ ಒಂದನ್ನು ಮುಂದಿನ ಭಾರತದ ಪ್ರಧಾನ ಮಂತ್ರಿಯನ್ನಾಗಿ ಮಾಡಿ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
https://twitter.com/KanganaTeam/status/1386924814242258944?s=19
#Resign_PM_Modi ಎಂಬ ಹ್ಯಾಶ್‌ಟ್ಯಾಗ್ ಬೆಳಿಗ್ಗೆಯಿಂದ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು, ಭಾರತದಲ್ಲಿನ ಕೊರೋನಾ ಸಾಂಕ್ರಾಮಿಕದ ಎರಡನೇ ಅಲೆಗೆ ನೆಟಿಜನ್‌ಗಳು ಒಂದು ಭಾಗ ಪ್ರಧಾನಿ ಮೋದಿಯನ್ನು ದೂಷಿಸುತ್ತಿದ್ದಾರೆ.
ನಟಿಯ ಟ್ವೀಟ್ ಗೆ ಪ್ರತಿಕ್ರಿಯಿಸಿದ ನೆಟಿಜನ್‌ಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೋವಿಡ್ -19 ರ ಎರಡನೇ ಅಲೆಯ ಸಂದರ್ಭದಲ್ಲಿ ಕುಂಭಮೇಳ ಮತ್ತು ಚುನಾವಣಾ ಪ್ರಚಾರದಂತ ಸಾಮೂಹಿಕ ಕೂಟಗಳಿಗೆ ಪಿಎಂ ಮೋದಿ ಅನುಮತಿ ನೀಡಬಾರದಿತ್ತು ಎಂದು ಕೆಲವು ಬಳಕೆದಾರರು ಹೇಳಿದ್ದಾರೆ.
ಎಲ್ಲದಕ್ಕೂ ಹೈಪರ್ ಆಗಬೇಡಿ. ಈ ಬಾರಿ ಅವರು ಕುಂಭಮೇಳ ಮತ್ತು ಚುನಾವಣಾ ಸಭೆಯಂತಹ ಕೆಲವು ತಪ್ಪುಗಳನ್ನು ಮಾಡಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು. ಅವರು ದೇಶದ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸುವ ಸಮಯದಲ್ಲಿ ಅವರ ಮೇಲೆ ಜವಾಬ್ದಾರಿ ಇರುತ್ತದೆ ಮತ್ತು ಅವರು ದೇಶದ ಜನರ ಯೋಗಕ್ಷೇಮ ನೋಡಿಕೊಳ್ಳುವ ಭರವಸೆ ನೀಡಿರುತ್ತಾರೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಪಿಎಂ ಮೋದಿ ಮತ್ತು ಕಂಗನಾ ಅವರನ್ನು ಬೆಂಬಲಿಸಿ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ನೀವು ಯಾಕೆ ಯಾವಾಗಲೂ ಮೋದೀಜಿಯನ್ನು ಪ್ರತಿ ಕಾರಣಕ್ಕೂ ದೂಷಿಸುತ್ತಿದ್ದೀರಿ. ಈ ಪರಿಸ್ಥಿತಿಗೆ ನಾವು ಜವಾಬ್ದಾರರು. ನಾವು ಸಾಮಾಜಿಕ ದೂರವನ್ನು ಕಾಪಾಡಿಕೊಂಡಿಲ್ಲ, ಮಾಸ್ಕ್ ಧರಿಸಲಿಲ್ಲ. ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಎಲ್ಲ ಹಕ್ಕುಗಳಿವೆ. ಅವರು ಏಕೆ ತೆಗೆದುಕೊಳ್ಳಲಿಲ್ಲ ಎಂದು ಬಳಕೆದಾರರು ಪ್ರಶ್ನಿಸಿದ್ದಾರೆ.
ದೇಹದಲ್ಲಿ ಆಮ್ಲಜನಕ ಮಟ್ಟವನ್ನು ಸುಧಾರಿಸುವ ಆಹಾರ ಪದಾರ್ಥಗಳು#Saakshatv #healthtips #oxygenlevels https://t.co/ezVXsYLqrW
— Saaksha TV (@SaakshaTv) April 25, 2021
ಸುಲಭವಾಗಿ ತಯಾರಿಸಿ ವೆಜಿಟೇಬಲ್ ಫ್ರೈಡ್ ರೈಸ್#Saakshatv #cookingrecipe #vegetable #friedrice https://t.co/ov1kK94lbw
— Saaksha TV (@SaakshaTv) April 25, 2021
ನೀ ಹೀಂಗ ನೋಡಬ್ಯಾಡ ನನ್ನ…. ನೀ ಹೀಂಗ ನೋಡಿದರ ನನ್ನ….#Saakshatv #Lahari #ದ.ರಾ.ಬೇಂದ್ರೆ https://t.co/jU5gwi9Spg
— Saaksha TV (@SaakshaTv) April 27, 2021
ಕೊರೋನಾ ಸೋಂಕು ಧೃಡಪಟ್ಟರೆ ಏನು ಮಾಡಬೇಕು? ಇಲ್ಲಿದೆ ಆರೋಗ್ಯ ತಜ್ಞರ ಮಾಹಿತಿ#covidpositive #expertexplains https://t.co/SQKAbn69Dn
— Saaksha TV (@SaakshaTv) April 26, 2021
#Kangana #Bollywood