ಅಕ್ಕಿ ಕೇಳಿದ್ದಕ್ಕೆ “ಸಾಯೋದು ಒಳ್ಳೆಯದು” ಎಂದ ಉಮೇಶ್ ಕತ್ತಿ
ಬೆಳಗಾವಿ : ರಾಜ್ಯದಲ್ಲಿ ಕೊರೊನಾ ಸ್ಫೋಟ ಮುಂದುವರೆದಿದೆ. ಕೊರೊನಾ ಕಂಟ್ರೋಲ್ ಗೆ ಸರ್ಕಾರ 14 ದಿನಗಳ ಕಾಲ ಕಫ್ರ್ಯೂ ವಿಧಿಸಿದೆ.
ಈ ಮಧ್ಯೆ ಅಕ್ಕಿ ಕೇಳಿದ್ದಕ್ಕೆ ಆಹಾರ ಸಚಿವ ಉಮೇಶ್ ಕತ್ತಿ ಉಡಾಫೆ ಹೇಳಿಕೆಯನ್ನ ನೀಡಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ಕಿ ಕಡಿತ ಬಗ್ಗೆ ರೈತ ಸಂಘದ ಕಾರ್ಯಕರ್ತ ಈಶ್ವರ ಆರ್ಯರ ಎಂಬುವರು ಕತ್ತಿಗೆ ಕರೆ ಮಾಡಿ ಮಾತನಾಡಿದ್ದಾರೆ.
ಕರೆಯಲ್ಲಿ ಈಶ್ವರ್, 2 ಕೆಜೆ ಅಕ್ಕಿ ಮಾಡಿದ್ದೀರಾ ಸಾಲುತ್ತಾ..? ಎಂದು ಪ್ರಶ್ನಿಸಿದ್ದಾರೆ.ಇದಕ್ಕೆ ಸಚಿವರು 3 ಕೆಜಿ ರಾಗಿ ಮಾಡಿತ್ತೀವಿ ಎಂದಿದ್ದಾರೆ.
ಆಗ ಈಶ್ವರ್, ಉತ್ತರ ಕರ್ನಾಟಕ ಜನ ರಾಗಿ ತಿನ್ನುತ್ತಾರಾ..? ಎಂದು ಕೇಳಿದ್ದು, ಕತ್ತಿ ಅದಕ್ಕೆ 2 ಕೆಜಿ ಜೋಳ ಮಾಡಿದ್ದೀವಿ.
ಲಾಕ್ ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಉತ್ತರಿಸಿದ್ದಾರೆ.
ಈ ವೇಳೆ ಮಾತು ಮುಂದುವರಿಸಿದ ಈಶ್ವರ, ಲಾಕ್ ಡೌನ್ ಇದೆ ಅಲ್ಲಿಯವರೆಗೆ ಉಪವಾಸ ಸಾಯೋದಾ ಎಂದು ಮರುಪ್ರಶ್ನೆ ಹಾಕಿದ್ದಾರೆ.
ಆಗ ಸಚಿವರು, ಸಾಯೋದು ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಉಡಾಫೆಯ ಮಾತುಗಳನ್ನಾಡಿದ್ದಾರೆ. ಇದು ಈಗ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಉಡಾಫೆ ಸಚಿವರ ತಲೆದಂಡಕ್ಕೆ ಆಗ್ರಹಿಸಿದ್ದಾರೆ.










