ಕೊರೊನಾ covid ಕೂಪವಾಗಿದೆ ಬೆಂಗಳೂರು : ಇಂದು 21,602 ಕೇಸ್ ಪತ್ತೆ
ಬೆಂಗಳೂರು : ದಿನ ಕಳೆದಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ಜೋರಾಗುತ್ತಿದೆ.
ಇಂದು ಮತ್ತೆ ನಗರದಲ್ಲಿ ಕೊರೊನಾ ಸ್ಫೋಟವಾಗಿದ್ದು, 21,602 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 2,59,058 ಕ್ಕೆ ತಲುಪಿದೆ.
ನಗರದ ಬೊಮ್ಮನಹಳ್ಳಿ ವಲಯದಲ್ಲಿ- 2,056, ದಾಸರಹಳ್ಳಿ- 707, ಬೆಂಗಳೂರು ಪೂರ್ವ ವಲಯ-3,360, ಮಹದೇವಪುರ- 2,564, ಆರ್ ಆರ್ ನಗರ- 1,388, ಬೆಂಗಳೂರು ದಕ್ಷಿಣ ವಲಯ- 2,955, ಪಶ್ಚಿಮ ವಲಯ- 2,225, ಯಲಹಂಕ- 1,442, ಬೆಂಗಳೂರು ಹೊರವಲಯದಲ್ಲಿ 3,280 ಜನರಿಗೆ ಸೋಂಕು ತಗುಲಿದೆ.
ನಿನ್ನೆ ಬೆಂಗಳೂರಿನಲ್ಲಿ 26,756 ಮಂದಿಗೆ ಸೋಂಕು ತಗುಲಿತ್ತು.










