ಡಿಕೆಶಿ, ಹೆಚ್ ಡಿಕೆ ವಿರುದ್ಧ ತಿರುಗಿ ಬಿದ್ದ ಕತ್ತಿ ಅಭಿಮಾನಿಗಳು
ಚಿಕ್ಕೋಡಿ : ಸಾಯೋದೆ ಒಳ್ಳೆಯದು ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಚಿವ ಉಮೇಶ ಕತ್ತಿ ಅಭಿಮಾನಿಗಳು ಅಣುಕು ಶವಯಾತ್ರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ಕತ್ತಿ ಅಭಿಮಾನಿಗಳು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಪ್ರತಿಕೃತಿಗಳ ಅಣುಕು ಶವಯಾತ್ರೆ ಮಾಡಿದ್ದಾರೆ. ಜೊತೆ ಜೊತೆಗೆ ಅಂತ್ಯ ಸಂಸ್ಕಾರ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಕಿಕೇಳಿದ ರೈತನಿಗೆ ಉಮೇಶ್ ಕತ್ತಿ ಸಾಯೋದು ಒಳ್ಳೆಯದು ಎಂದು ಉಡಾಫೆ ಉತ್ತರ ನೀಡಿದ್ದರು. ಇದಕ್ಕೆ ಡಿಕೆಶಿ , ಹೆಚ್ ಡಿಕೆ ಉಮೇಶ್ ಕತ್ತಿ ರಾಜೀನಾಮೆಗೆ ಒತ್ತಾಯಿಸಿದ್ದರು.










