ಬೈ ಎಲೆಕ್ಷನ್ ರಿಸಲ್ಟ್ : ಮಸ್ಕಿ ಕುಸ್ತಿಯಲ್ಲಿ ಗೆಲುವು ಯಾರಿಗೆ..?
ಬೆಂಗಳೂರು : ಇಂದು ಬೆಳಗಾವಿ ಲೋಕಸಭಾ, ಮಸ್ಕಿ ಹಾಗೂಬಸವ ಕಲ್ಯಾಣ ವಿಧಾನಸಭೆ ಉಪಚುನಾವಣೆಗಳ ಫಲಿತಾಂಶ ಪ್ರಕಟವಾಗಲಿದೆ. ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನ ನಡೆಸಿದೆ.
ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆಯಾ ಕ್ಷೇತ್ರದಲ್ಲಿ ಆರಂಭವಾಗಲಿದ್ದು, ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ.
ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವ ಕಲ್ಯಾಣ ವಿಧಾನಸಭೆ ಕ್ಷೇತ್ರಗಳಿಗೆ ಏಪ್ರಿಲ್ 17ರಂದು ಮತದಾನ ನಡೆದಿತ್ತು. ಇಂದು ಈ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಮಸ್ಕಿ ಉಪಚುನಾವಣೆಯನ್ನು ಈ ಬಾರಿ ಬಿಜೆಪಿ – ಕಾಂಗ್ರೆಸ್ ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದವು. ಇದೇ ಕಾರಣಕ್ಕಾಗಿ ಪಕ್ಷಗಳ ನಾಯಕರು ಅಲ್ಲೆ ಮೊಕ್ಕಾಂ ಹೂಡಿ ಮತಬೇಟೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮಸ್ಕಿ ಕುಸ್ತಿಯಲ್ಲಿ ಗೆಲುವು ಯಾರಿಗೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ.
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್ ನಿಂದ ಬಸನಗೌಡ ಸೇರಿದಂತೆ 8 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.