ತನಿಗಿಂತ 27 ವರ್ಷ ಚಿಕ್ಕವರಾದ ದಿಶಾಗೆ ಮುತ್ತಿಟ್ಟ ಸಲ್ಲು ಭಾಯ್ – ಟ್ರೋಲಿಗರ ಬಾಯ್ಮುಚ್ಚಿಸಿದ್ದು ಹೇಗೆ ಗೊತ್ತಾ..?
ಮುಂಬೈ : ಬಾಲಿವುಡ್ ನ ಸುಲ್ತಾನ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷೆಯ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರದ ಟ್ರೇಲರ್ ರಿಲೀಸ್ ಆಗಿ ಸೋಷಿಯಲ್ ಮೀಡಿಯಾಗಳಲ್ಲಿ ಹಲ್ ಚಲ್ ಸೃಷ್ಟಿಸಿದೆ. ಅನೇಕರು ಸಲ್ಲು ಭಾಯ್ ಲುಕ್ , ಹಾಗೂ ದಿಶಾ ಜೊತೆಗಿನ ರೋಮ್ಯಾಂಟಿಕ್ ಸೀನ್ಸ್ ಗೆ ಫಿದಾ ಆಗಿದ್ದಾರೆ.
ಮತ್ತೊಂದೆಡೆವಾಸ್ತವವಾಗಿ ತನಗಿಂತ 27 ವರ್ಷ ಚಿಕ್ಕವರದಾ ದಿಶಾಗೆ ಮುತ್ತಿಟ್ಟ ಸಲ್ಮಾಣ್ ಖಾನ್ ರನ್ನ ನೆಟ್ಟಿಗರು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಆದ್ರೆ ಇಂತಹ ಟ್ರೋಲ್ ಗಳಿಗೆ ಸಲ್ಲು ತಮ್ಮದೇ ಶೈಲಿಯಲ್ಲಿ ಸಖತ್ ಕೂಲ್ ಆಗಿ ರೆಸ್ಪಾನ್ಸ್ ಕೊಟ್ಟಿದ್ದು, ಟ್ರೋಲಿಗರ ಬಾಯ್ಮುಚ್ಚಿಸಿದ್ದಾರೆ.
ಅಂದ್ಹಾಗೆ ಸಲ್ಲು ಭಾಯ್ ಇದೇ ಮೊದಲ ಬಾರಿಗೆ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೇಕಿಂಗ್ ವಿಡಿಯೋದಲ್ಲಿ ಮಾತನಾಡಿರುವ ಸಲ್ಮಾನ್ ಖಾನ್ ‘ನನಗಿಂತ ದಿಶಾ 27 ವರ್ಷ ಚಿಕ್ಕವಳು. ಆದರೆ ಸಿನಿಮಾದಲ್ಲಿ ಇಬ್ಬರು ಒಂದೇ ವಯಸ್ಸಿನವರ ಹಾಗೆ ಕಾಣುತ್ತೇವೆ’ ಎಂದು ಹೇಳಿ ಸಿಫಲ್ ಉತ್ತರದ ಮೂಲಕ ಟ್ರೋಲ್ ಗಳಿಗೆ ಉತ್ತರಿಸಿದ್ದಾರೆ.
ಇದೇ ವೇಳೆ ‘ ದಿಶಾಗೆ ಚುಂಬಿಸಿದ್ದು ಅಲ್ಲ. ದಿಶಾ ಬಾಯಿಗೆ ಟೇಪ್ ಹಾಕಲಾಗಿತ್ತು. ಟೇಪ್ ಗೆ ಚುಂಬಿಸಿದ್ದು ಎಂದು ಹೇಳುವ ಮೂಲಕ ಕಿಸ್ಸಿಂಗ್ ದೃಶ್ಯದ ಬಗ್ಗೆ ಸಲ್ಮಾನ್ ಖಾನ್ ಸ್ಪಷ್ಟನೆ ನೀಡಿ ಟ್ರೋಲ್ ಪೇಜ್ ಗಳಿಗೆ ಮಾತಿನ ಪಂಚ್ ನೀಡಿದ್ದಾರೆ. ಅಲ್ದೇ ದಿಶಾ ಪಟಾನಿ ಕೆಲಸವನ್ನು ಮೆಚ್ಚಿಕೊಂಡಿರುವ ಸಲ್ಮಾನ್ ಅವರು ಅದ್ಭುತವಾಗಿ ನಟಿಸಿದ್ದಾರೆ. ತುಂಬಾ ಸುಂದರವಾಗಿ ಕಾಣಿಸುತ್ತಾರೆ. ಇಬ್ಬರು ಒಂದೇ ವಯಸ್ಸಿನವರ ಹಾಗೆ ಕಾಣುತ್ತೇವೆ ಎಂದಿದ್ದಾರೆ.
ಸದ್ಯ ಕೊರೊನಾ ಹಾವಳಿ ನಡುವೆ ಸಿನಿಮಾ ಥಿಯೇಟರ್ ಗಿಂತ OTTಯಲ್ಲಿ ರಿಲೀಸ್ ಆಗುವುದೇ ಸೂಕ್ತ ಎಂದು ಭಾವಿಸಿರುವ ಸಿನಿಮಾ ತಂಡ OTT ಯಲ್ಲಿ ಸಿನಿಮಾ ರೈಟ್ಸ್ ಸೇಲ್ ಮಾಡಿದೆ. ಮೂಲಗಳ ಪ್ರಕಾರ ಸಿನಿಮಾ ದೊಡ್ಡ ಮೊತ್ತಕ್ಕೆ ಸೇರ್ ಆಗಿದ್ದು, ಶೀಘ್ರವೇ ಒಟಿಟಿಯಲ್ಲಿ ತೆರೆಗೆ ಬರುತ್ತಿದೆ.








