ADVERTISEMENT
Wednesday, February 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಹೊಸಬರ ಬೆನ್ನಿಗೆ ನಿಂತ ಸ್ಯಾಂಡಲ್‍ವುಡ್ ಸ್ಟಾರ್ರ್ಸ್….

admin by admin
February 11, 2020
in Cinema, Newsbeat
Share on FacebookShare on TwitterShare on WhatsappShare on Telegram

ಸ್ಯಾಂಡಲ್‍ವುಡ್‍ನಲ್ಲಿ ಹೊಸಬರ ಆಗಮನ ಜೋರಾಗಿದೆ. ಈ ನಡುವೆ ಹೊಸಬರ ಹೊಸ ಪ್ರಯತ್ನಕ್ಕೆ ಸ್ಟಾರ್ ನಟರು ಹೆಗಲು ಕೊಟ್ಟಿರುವುದು ಕನ್ನಡ ಸಿನಿಮಾಗಳ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ.

Related posts

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

February 4, 2026
ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

February 4, 2026

ಕೆಜಿಎಫ್, ಅವನೇ ಶ್ರೀಮನ್ನಾರಾಯಣ ಸಿನಿಮಾಗಳ ಬಳಿಕ ಕನ್ನಡ ಸಿನಿಮಾಗಳ ಮಾರ್ಕೆಟ್ ವಿಸ್ತಾರಗೊಂಡಿದೆ. ಈ ನಡುವೇ ಹೊಸಬರ ಸಿನಿಮಾಗಳು ನೋಡುಗರನ್ನ ಸೆಳೆಯುವಂತೆ ಮಾಡುತ್ತಿವೆ. ನ್ಯೂಕಮರ್ ಗಳಿಗೆ ನಮ್ಮ ಸ್ಯಾಂಡಲ್‍ವುಡ್ ಸ್ಟಾರ್ ನಟರು ಬೆನ್ನುತಟ್ಟಿ
ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಶೆಕೆ ಆರಂಭವಾಗಿದೆ ಎಂದೇ ಹೇಳಬಹುದು.

Yash_Darshan

ಕಳೆದ ಎರಡು ವಾರಗಳಲ್ಲಿ ಹೊಸಬರ ಹಲವು ಕನ್ನಡ ಸಿನಿಮಾಗಳು ರಿಲೀಸ್ ಆಗಿವೆ. ಹೀಗೆ ಸ್ಯಾಂಡಲ್‍ವುಡ್‍ಗೆ ಆಗಮಿಸುತ್ತಿರುವ ಹೊಸಬರಿಗೆ ದರ್ಶನ್, ಪುನೀತ್, ಸುದೀಪ್, ಶ್ರೀಮುರುಳಿ, ಯಶ್, ರಕ್ಷಿತ್ ಶೆಟ್ಟಿ ಪ್ರೋತ್ಸಾಹ ನೀಡುತ್ತಿದ್ದಾರೆ.

Puneeth_Rajkumar

ಪ್ರಜ್ವಲ್ ದೇವರಾಜ್ ಅವರ ಜೆಂಟಲ್ ಮ್ಯಾನ್, ಲವ್ ಮಾಕ್ಟೈಲ್, ದಿಯಾ ಸಿನಿಮಾಗಳಿಗೆ ಪುನೀತ್, ಯಶ್, ಶ್ರೀಮುರುಳಿ ಮತ್ತು ರಕ್ಷಿತ್ ಶೆಟ್ಟಿ ಗುಡ್ ಲಕ್ ಹೇಳಿ ಯಶಸ್ವಿ ಕಾಣಲಿ ಎಂದು ಹರಸಿ ಹಾರೈಸಿದ್ದಾರೆ.

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್‍ಮ್ಯಾನ್’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ದರ್ಶನ್ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಡಿ ಬಾಸ್ ಕನ್ನಡ ಚಿತ್ರರಂಗದ ಕೆಲವು ವಿಚಾರಗಳ ಬಗ್ಗೆ ಬೇಸರ
ವ್ಯಕ್ತಪಡಿಸಿದ್ರು. ಒಂದು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಆದರೆ ಪರಭಾಷೆಯಲ್ಲಿ ಆಗಿದ್ರೆ ಕನ್ನಡದವರು ಸೇರಿ ಬೆನ್ನು ತಟ್ಟಿ, ಚಪ್ಪಾಳೆ ತಟ್ಟಿ ಜೊತೆಗೆ ದುಡ್ಡು ಕೊಟ್ಟು ಕಳುಹಿಸುತ್ತೇವೆ. ನಾವು ಹೆಮ್ಮೆಯಿಂದ ಕನ್ನಡದವರು ಎಂದು ಹೇಳುತ್ತೇವೆ. ಆದರೆ ನಾವು ಏನೂ ಮಾಡಲ್ಲ. ಈಕಡೆ ಆಕಡೆಯವರನ್ನು ನೋಡಿಕೊಂಡು ನಮ್ಮವರನ್ನು ನಾವು ಬಿಟ್ಟು ಬಿಡುತ್ತೇವೆ. ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದ್ದರು.

ಅದೇ ಆದಿಯಾಗಿ ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ ಸಿನಿಮಾಗೆ ಕಿಚ್ಚ ಸುದೀಪ್ ಶುಭ ಹಾರೈಸಿದ್ರು. ಚಿತ್ರಕ್ಕೆ ವಾಯ್ಸ್ ನೀಡೋ ಮೂಲಕ ಕೃಷ್ಣನ ಬೆನ್ನಿಗೆ ನಿಂತು ಹಾರೈಸಿದ್ರು. ಹಾಗೇ ನಾನು ಮತ್ತು ಗುಂಡ ಸಿನಿಮಾಗೂ ಟ್ವಿಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಕಿಚ್ಚ, ಚಿತ್ರವೂ ಶತದಿನ ಆಚರಿಸಲು ಎಂದು ಶುಭ ಹಾರೈಸಿದ್ರು.

ಇತ್ತೀಚೆಗೆ ತೆರೆಕಂಡ ದಿಯಾ ಸಿನಿಮಾಗೆ ರಕ್ಷಿತ್ ಶೆಟ್ಟಿ ತುಂಬು ಹೃದಯದಿಂದ ಯಶಸ್ವಿಯಾಗಲೇಂದು ಹಾರೈಸಿದ್ರು. ಇದಕ್ಕಾಗಿ ರಕ್ಷಿತ್ ಶೆಟ್ಟಿ ತಮ್ಮ ಫೇಸ್ ಬುಕ್ ಅಕೌಂಟ್‍ನ ವಾಲ್‍ಪೇಪರ್ ಬದಲಿಸಿ, ಅದರಲ್ಲಿ ದಿಯಾ ಸಿನಿಮಾದ ಪೋಸ್ಟರ್ ಹಾಕಿ ಉತ್ತೇಜನ ನೀಡಿದ್ರು.

Love Mocktail

ಇದು ಪ್ರಯೋಗಾತ್ಮಕ ಚಿತ್ರ ಅಲ್ಲ. ಒಳ್ಳೆಯ ಲವ್ ಸ್ಟೋರಿ ಇದೆ. ಎಲ್ಲರೂ ಥಿಯೇಟರ್‍ಗೆ ಬಂದು ನೋಡುವಂತಹ ಸಿನಿಮಾ. ಇಂಥ ಚಿತ್ರಕ್ಕೆ ಬಂಡವಾಳ ಹೂಡಿದ ನಿರ್ಮಾಪಕರಿಗೆ ಮೊದಲು ಧನ್ಯವಾದ ಹೇಳಬೇಕು. ನಿರ್ದೇಶಕರು ಕೂಡ ತುಂಬ ಚೆನ್ನಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಎಲ್ಲರೂ ಥಿಯೇಟರ್‍ಗೆ ಬಂದು ಸಿನಿಮಾ ನೋಡಿ. ಒಳ್ಳೊಳ್ಳೆಯ ಸಿನಿಮಾಗೆ ನಷ್ಟವಾದರೆ, ಮತ್ತೆ ಇಂಥ ಒಳ್ಳೆಯ ಸಿನಿಮಾವನ್ನು ಮಾಡಲು ಬೇರೆಯವರು ಭಯಪಡುತ್ತಾರೆ. ಇನ್ನೊಂದು ದೊಡ್ಡ ಚಿತ್ರ ಮಾಡಬೇಕು ಎಂದರೆ ದಿಯಾ ಗೆಲ್ಲಲೇಬೇಕು’ ಎಂದು ರಕ್ಷಿತ್ ಶೆಟ್ಟಿ ಹೇಳಿ ಚಿತ್ರತಂಡಕ್ಕೆ ಶೂಭ ಹಾರೈಸಿದ್ರು.

ಒಟ್ಟಾರೆ. ಪರಭಾಷಿಕರ ಹಾವಳಿಯ ನಡುವೆ ನಮ್ಮ ಸಿನಿಮಾಗಳು ಕನ್ನಡಿಗರಿಗೆ ಕಾಣಿಸದೇ ಇರುವುದು ವಿಪರ್ಯಾಸ ಎಂದು ತಮ್ಮ ಅಸಮಾಧಾನವನ್ನ ºಹೊರಹಾಕಿದ್ದಾರೆ. ಇಂತಹ ಉತ್ತಮ ಸಿನಿಮಾಗಳನ್ನ ಪ್ರೋತ್ಸಾಹಿಸದೇ ಇದ್ದರೇ ಕನ್ನಡಿಗರಾದ ನಾವು ನಿಜಕ್ಕೂ ಕನ್ನಡ ನಾಡು ನುಡಿಗೆ ದ್ರೋಹ ಬಗೆದಂತೆ ಎಂದು ಹೇಳಿದ್ದಾರೆ.

Tags: cinimaxDarling KrishnaDarshanmilana nagarajPuneeth RajkumarRakshith ShettySrii Muraliyash
ShareTweetSendShare
Join us on:

Related Posts

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

ಗುತ್ತಿಗೆದಾರರ ಸಂಘದಲ್ಲೇ ಭ್ರಷ್ಟಾಚಾರ ಆರೋಪ: 3% ಕಮಿಷನ್ ಬೇಡಿಕೆಯ ಆಡಿಯೋ ವೈರಲ್

by Shwetha
February 4, 2026
0

ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದ ಗುತ್ತಿಗೆದಾರರ ಸಂಘವೇ ಈಗ ಭಾರೀ ವಿವಾದದ ಕೇಂದ್ರಬಿಂದುವಾಗಿದೆ. ಸಂಘದೊಳಗೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದ...

ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

ತೆರಿಗೆ ಬಾಕಿ ಕಟ್ಟದವರಿಗೆ ಬಿಗ್ ಶಾಕ್: 7 ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜಿಗೆ ಮುಂದಾದ GBA

by Shwetha
February 4, 2026
0

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಪಾವತಿಸದ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. GBA ಅಧೀನದಲ್ಲಿರುವ 5 ನಗರ ಪಾಲಿಕೆ...

SBI ಗ್ರಾಹಕರೇ ಎಚ್ಚರ ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ಬಂದ ಈ ಮೆಸೇಜ್ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ

SBI ಗ್ರಾಹಕರೇ ಎಚ್ಚರ ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ಬಂದ ಈ ಮೆಸೇಜ್ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ

by Shwetha
February 4, 2026
0

ಬೆಂಗಳೂರು: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕೋಟ್ಯಂತರ ಗ್ರಾಹಕರಿಗೆ ತುರ್ತು ಎಚ್ಚರಿಕೆಯೊಂದನ್ನು ರವಾನಿಸಿದೆ. ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್ ವ್ಯವಹಾರಗಳು...

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

by Shwetha
February 4, 2026
0

ಬೆಂಗಳೂರು: ಕರ್ನಾಟಕದಲ್ಲಿ ಪಡಿತರ ಚೀಟಿಗಾಗಿ ಕಾಯುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದೆ. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್...

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

by Shwetha
February 4, 2026
0

ಬೆಂಗಳೂರು: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಉರ್ದು ಶಾಲೆಗಳ ಕಾರ್ಯನಿರ್ವಹಣಾ ಅವಧಿಯನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಇದೀಗ ರಾಜಕೀಯ ವಲಯದಲ್ಲಿ ಭಾರೀ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram