ಕಳೆದ ವರ್ಷ ಇರದ “ರೆಮ್ಡಿಸಿವಿರ್ ಕೋವಿಡ್ ಗೆ ಜೀವರಕ್ಷಕನಾ”?
ಬೆಂಗಳೂರು : ದೇಶದಲ್ಲಿ ಕೊರೊನಾ ಎರಡನೇ ಅಲೆ ತಾಂಡವವಾಡುತ್ತಿದೆ. ಪ್ರತಿ ದಿನ ಮೂರು ಲಕ್ಷಕ್ಕೂ ಅಧಿಕ ಪ್ರಕರಣಗಳು ದೇಶದಲ್ಲಿ ವರದಿ ಆಗುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣಕ್ಕೆ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸಮಸ್ಯೆ ಉಂಟಾಗುತ್ತಿದೆ. ಇದರ ಮಧ್ಯೆ ರೆಮ್ಡಿಸಿವಿರ್ ಎಂಬ ಚುಚ್ಚುಮದ್ದಿನ ಕೊರತೆ ಇದೆ ಅನ್ನೋ ಮಾತುಗಳು ಕೂಡ ಕೇಳಿಬರುತ್ತಿವೆ. ರೆಮ್ಡಿಸಿವಿರ್ ಗೆ ಸದ್ಯ ಹೆಚ್ಚಿನ ಬೇಡಿಕೆ ಇದೆ. ಇದೇ ಕಾರಣಕ್ಕೆ ಇದನ್ನ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಹಾಗಾದ್ರೆ ಮೊದಲ ಕೊರೊನಾ ಅಲೆ ವೇಳೆ ಇರದ ರೆಮ್ಡಿಸಿವಿರ್ ಕೋವಿಡ್ ಗೆ ಜೀವರಕ್ಷಕನಾ..? ಅನ್ನೋದು ಸದ್ಯ ಎಲ್ಲರಿಗೂ ತಿಳಿದುಕೊಳ್ಳುವುದು ಅತ್ಯವಶ್ಯಕತೆಯಾಗಿದೆ.
ಯಾಕೆಂದ್ರೆ ರೆಮ್ಡಿಸಿವಿರ್ ಅನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಬಡವರನ್ನ ಕೊಳ್ಳೆ ಹೊಡೆಯಲಾಗುತ್ತಿದೆ. ಇದರ ಹಿಂದೆ ದೊಡ್ಡ ಮೆಡಿಕಲ್ ಮಾಫಿಯಾ ನಡೆಯುತ್ತಿದೆ ಅನ್ನೋ ಊಹಾಪೋಹಗಳು ಕೇಳಿಬರುತ್ತಿವೆ. ಹೀಗಾಗಿ ಇದು ಕೊರೊನಾಗೆ ರಾಮಬಾಣನಾ..? ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ.
ಸದ್ಯ ಕೊರೊನಾಗಿಂತಲೂ ಹೆಚ್ಚಾಗಿ ಸದ್ದು ಮಾಡುತ್ತಿರುವ ರೆಮ್ಡಿಸಿವಿರ್ “ನಾಟ್ ಎ ಲೈಫ್ ಸೇವಿಂಗ್ ಡ್ರಗ್” ಅಂದ್ರೆ ಇದು ಜೀವರಕ್ಷಕ ಮದ್ದಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ರೆಮ್ಡಿಸಿವಿರ್ ನಾಟ್ ಎ ಲೈಫ್ ಸೇವಿಂಗ್ ಡ್ರಗ್ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ. ರೆಮ್ಡಿಸಿವರ್ ನ ಯಾವ ಸಂದರ್ಭದಲ್ಲಿ ಕೂಡಬೇಕು ಎಂಬುದು ಶ್ವಾಸಕೋಶ ತಜ್ಞರಿಗೆ ಗೊತ್ತು. ಇದು ಜೀವ ಉಳಿಸುವ ನಿರ್ದಿಷ್ಟವಾದ ಔಷಧವಲ್ಲ ಎಂದಿದ್ದಾರೆ.
ರೆಮ್ಡಿಸಿವಿರ್ ಚುಚ್ಚುಮದ್ದು ಆಂಟಿ ವೈರಲ್ ಡ್ರಗ್ಸ್
ವೈದ್ಯರು ಹೇಳುವ ಪ್ರಕಾರ, ರೆಮ್ಡಿಸಿವಿರ್ ಚುಚ್ಚುಮದ್ದು ಆಂಟಿ ವೈರಲ್ ಡ್ರಗ್ಸ್ ಆಗಿದೆ. ಇದನ್ನ ಸೋಂಕಿತ ರೋಗಿಗೆ ಉಸಿರಾಟದ ತೊಂದರೆ ಇಲ್ಲದೇ ಇದ್ದಾಗ ಕೊಟ್ಟರೆ, ಆಗ ಅದು ದೇಹದಲ್ಲಿ ಸೋಂಕು ಉಲ್ಬಣಗೊಳ್ಳುವುದನ್ನ ಕಡಿಮೆ ಮಾಡುತ್ತೆ ಅಂತ ಕೊಡಲು ಶುರು ಮಾಡಿದ್ದಂತೆ. ಆದರೆ, ಇದನ್ನ ಕೊಡದೇ ಇದ್ದರೂ ಸೋಂಕಿತರಿಗೆ ಯಾವುದೇ ತೊಂದರೆ ಆಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ










