ಮನೆಯೊಳಗಿದ್ದುಕೊಂಡೇ ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ : ಕೋಟಾ ಶ್ರೀನಿವಾಸ್
ಉಡುಪಿ : ಮನೆಯೊಳಗಿದ್ದುಕೊಂಡೇ ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ ಎಂದು ಸಚಿವ ಕೋಟಾ ಶ್ರೀನಿವಾಸ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ವಿಫಲ ಆಗಬಾರದು ಅನ್ನೋದು ನಮ್ಮ ಬಯಕೆ. ಲಾಕ್ ಡೌನ್ ಯಶಸ್ವಿ ಗೊಳಿಸಲು ಎಲ್ಲರೂ ಜೊತೆಯಾಗಿ ಕೆಲಸ ಮಾಡ್ತಿದ್ದೇವೆ.
ಕೊರೋನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಪ್ರಕರಣಗಳ ಸಂಖ್ಯೆ ಮುಂದುವರಿದರೆ ವ್ಯವಸ್ಥೆಯನ್ನು ಕಠಿಣ ಗಳಿಸಬೇಕಾಗುತ್ತೆ,
ಹಾಗೆ ಆಗದಿರಲಿ ಅನ್ನೋದು ನಮ್ಮ ಆಶಯ ಎಂದರು.
ಇನ್ನು ಕೊರೋನಾ ನಿಯಂತ್ರಣಕ್ಕೆ ಸಿಎಂ ಕಠಿಣ ಕ್ರಮ ಕೈಗೊಂಡಿದ್ದಾರೆ. ಎಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಲಾಕ್ ಡೌನ್ ಪಾಲನೆ ಕುರಿತು ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.
ಸಮಯ ನಿಗದಿ, ಅಧಿಕಾರಿಗಳ ಬಳಕೆ, ಪಾಸಿಟಿವ್ ರೋಗಿಗಳ ಆಸ್ಪತ್ರೆ ಸೇರ್ಪಡೆ ಗೆ ಸೂಚನೆ ನೀಡಿದ್ದಾರೆ. ಜನತೆ ಮನೆಯೊಳಗೆ ಇದ್ದುಕೊಂಡೇ ಕಫ್ರ್ಯೂ ಪಾಲನೆಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಅಗತ್ಯ ವಸ್ತು ಖರೀದಿಗೆ 10 ಗಂಟೆಯವರೆಗೆ ಮಾತ್ರ ಸಮಯವಕಾಶ ಇದೆ. ಆದರೆ ಜನ ಹತ್ತು ಗಂಟೆಯ ನಂತರ ಓಡಾಟ ಮಾಡುತ್ತಿದ್ದಾರೆ. ಹತ್ತು ಗಂಟೆಯ ನಂತರ ಹೋರಾಟ ಸರಿಯಲ್ಲ ಎಂದು ಹೇಳಿದ ಶ್ರೀನಿವಾಸ್, ಸಮಯ ಸೀಮಿತ ಗೊಳಿಸುವ ಬಗ್ಗೆ ಸಿಎಂ ಮತ್ತು ಆರೋಗ್ಯ ಮಂತ್ರಿ ಜೊತೆ ಮಾತನಾಡುವೆ.
ಪಾಸಿಟಿವ್ ಬಂದ ವ್ಯಕ್ತಿಗೆ ಅಗತ್ಯವಿದ್ದರೆ ಆಸ್ಪತ್ರೆಗೆ ಕಳುಹಿಸುತ್ತೇವೆ. ಮನೆಯಲ್ಲಿ ವ್ಯವಸ್ಥೆ ಇಲ್ಲದ ವ್ಯಕ್ತಿಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಲಾಕ್ ಡೌನ್ ಕಟ್ಟುನಿಟ್ಟಿನ ಪಾಲನೆಗೆ ಸೂಕ್ತ ಕ್ರಮ ಕೈಗೊಳ್ತೇವೆ.
ಜನರ ಓಡಾಟ ಹೆಚ್ಚಾದರೆ ಕೊರೋನ ನಿಯಂತ್ರಣ ಸಾಧ್ಯವಿಲ್ಲ. ಹೀಗಾಗಿ ಹತ್ತು ಗಂಟೆಯ ಒಳಗಾಗಿ ಜನರು ಮನೆ ಸೇರಬೇಕು ಎಂದು ಮನವಿ ಮಾಡಿಕೊಂಡರು.










