ಕಾಂಟ್ರವರ್ಸಿ ‘ಕ್ವೀನ್’ ಗೆ ಶಾಕ್ ಮೇಲೆ ಶಾಕ್ – ಕಂಗನಾರನ್ನ ಬ್ಯಾನ್ ಮಾಡಿದ ಖ್ಯಾತ ಡಿಸೈನರ್ಸ್..!
ಕಾಂಟ್ರವರ್ಸಿ ಕ್ವೀನ್ ಕಂಗನಾಗೆ ಯಾಕೋ ಟೈಮ್ ಸರಿಯಿಲ್ಲ ಅಂತ ಕಾಣ್ತಿದೆ. ಇತ್ತೀಚೆಗೆ ಒಂದಾದ ನಂತರ ಒಂದು ಶಾಕ್ ಸಿಗುತ್ತಿದೆ. ಇತ್ತೀಚೆಗೆ ಟ್ವಿಟ್ಟರ್ ನಿಂದ ಕಂಗನಾರನ್ನ ಶಾಶ್ವತವಾಗಿ ಕಳುಹಿಸಿಕೊಟ್ಟಿರುವ ಆಘಾತವನ್ನೇ ಅರಗಿಸಿಕೊಳ್ಳಲಾಗದ ಕಂಗನಾಗೆ ಮತ್ತೊಂದು ಆಘಾತ ಕೊಟ್ಟಿದ್ಯಾರು ಅಂತೀರಾ…?
ಬಾಲಿವುಡ್ ನ ಖ್ಯಾತ ಡಿಸೈನರ್ಸ್ ಆಗಿರುವ ಆನಂದ್ ಭೂಷಣ್ ಮತ್ತು ರಿಮ್ ಜಿಮ್ ದಾಡು ತಮ್ಮ ಬ್ರ್ಯಾಂಡ್ ನಿಂದ ಕಂಗನಾ ಅವರನ್ನು ಬ್ಯಾನ್ ಮಾಡಿದೆ. ಇನ್ಮುಂದೆ ಕಂಗನಾ ಕಂಗನಾ ಜೊತೆ ಕೆಲಸ ಮಾಡುವುದಿಲ್ಲ ಮತ್ತು ಈಗಾಗಲೇ ಡಿಸೈನ್ ಮಾಡಿದ ಎಲ್ಲಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡುವುದಾಗಿ ಬಹಿರಂಗ ಪಡಿಸಿದ್ದಾರೆ.
ಆನಂದ್ ಭೂಷಣ್ ಅವರು ಟ್ವೀಟ್ ಮಾಡಿ ‘ಇತ್ತೀಚೆಗೆ ನಡೆದಂತಹ ಘಟನೆಯಿಂದಾಗಿ ಕಂಗನಾ ರಣಾವತ್ ಅವರೊಂದಿಗಿನ ಎಲ್ಲಾ ಸಹಯೋಗದ ಚಿತ್ರಗಳನ್ನು ನಮ್ಮ ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕುತ್ತಿದ್ದೇವೆ. ಭವಿಷ್ಯದಲ್ಲಿ ಯಾವುದೇ ಪ್ರಾಜೆಕ್ಟ್ ಗೂ ಅವರ ಜೊತೆ ಕೆಲಸ ಮಾಡಲ್ಲ ಎಂದು ಪ್ರತಿಜ್ಞೆ ಮಾಡುತ್ತೇವೆ. ನಮ್ಮ ಬ್ರ್ಯಾಂಡ್ ಯಾವುದೇ ಧ್ವೇಷ ಭಾಷಣವನ್ನು ಬೆಂಬಲಿಸುವುದಿಲ್ಲ’ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ರಿಮ್ ಜಿಮ್ ಟ್ವಿಟ್ ಮಾಡಿ, ‘ಒಳ್ಳೆಯ ಕೆಲಸ ಮಾಡಲು ಎಂದಿಗೂ ತಡಮಾಡಬಾರದು. ಕಂಗನಾ ಜೊತೆಗಿನ ಈ ಹಿಂದಿನ ಎಲ್ಲಾ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುತ್ತಿದ್ದೇವೆ. ಭವಿಷ್ಯದಲ್ಲಿ ಯಾವುದೇ ಪ್ರಾಜೆಕ್ಟ್ ನಲ್ಲೂ ಕೆಲಸ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.
ಇನ್ನೂ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಂಗನಾ ಸಹೋದರಿ ರಂಗೋಲಿ ‘’ ಈ ವ್ಯಕ್ತಿ ಆನಂದ್ ಭೂಷಣ್ ಕಂಗನಾ ಹೆಸರಿನಲ್ಲಿ ಮೈಲೇಜ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಾವು ಅವರ ಜೊತೆ ಅಸೊಸಿಯೇಟ್ ಆಗಿಲ್ಲ ಮತ್ತು ಅವರು ಯಾರೆಂದು ನಮಗೆ ತಿಳಿದಿಲ್ಲ.’ ಎಂದು ಕಿಡಿಕಾರಿದ್ಧಾರೆ.
ಅಲ್ಲದೇ ‘ಈ ಸಣ್ಣ ಡಿಸೈನರ್ ತನ್ನನ್ನು ಪ್ರಮೋಟ್ ಮಾಡಿಕೊಳ್ಳಲು ಭಾರತದ ಖ್ಯಾತ ನಟಿಯ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ನಾನು ಅವನ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ. ನಾವು ಅವರೊಂದಿಗೆ ಎಲ್ಲಿ ಮತ್ತು ಹೇಗೆ ಅಸೋಸಿಯೇಟ್ ಆಗಿದ್ದೇವೆ ಎನ್ನುವುದು ಕೋರ್ಟ್ ನಲ್ಲಿ ಸಾಬೀತು ಆಗಲಿ. ನ್ಯಾಯಾಲಯದಲ್ಲಿ ನಿಮ್ಮನ್ನು ನೋಡುತ್ತೇವೆ’ ಎಂದು ಬರೆದುಕೊಂಡಿದ್ದಾರೆ.








