ದೇಶಾದ್ಯಂತ ಕೋವಿಡ್-19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮೇ 3 ರವರೆಗೆ ಲಾಕ್ ಡೌನ್ ಜಾರಿಯಲ್ಲಿದ್ದು, ಮುಸ್ಲಿಮರ ಪವಿತ್ರ ರಂಜಾನ್ ತಿಂಗಳ ಉಪವಾಸ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಮಸೀದಿ, ದರ್ಗಾಗಳಿಗೆ ಭೇಟಿ ಕೊಡುವುದನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಮತ್ತು ಹಜ್ ಇಲಾಖೆಯಿಂದ ಮಹತ್ವದ ಆದೇಶ ಹೊರಬಿದ್ದಿದ್ದು, ಇಫ್ತಾರ್ ಕೂಟ, ಜೋರಾಗಿ ಆಜಾನ್ ಕೂಗುವುದನ್ನು ನಿಷೇಧಿಸಿದೆ.
ರಂಜಾನ್ ತಿಂಗಳ ಉಪವಾಸ ಸಂದರ್ಭದಲ್ಲಿ ಮಸೀದಿ, ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿದ್ದು, ಧ್ವನಿವರ್ಧಕಗಳ ಮೂಲಕ ಅಜಾನ್ ಕೂಗುವುದು ಮತ್ತು ಉಪವಾಸ ವ್ರತದ ಅಂತ್ಯದ ಬಗ್ಗೆ ಮಾಹಿತಿ ನೀಡುವುದು, ಪ್ರವಚನ ನೀಡುವುದು, ಇಫ್ತಾರ್ ಕೂಟ ಮತ್ತು ಸಾಮೂಹಿಕ ಭೋಜನ ಕೂಟಗಳ ಆಯೋಜನೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹಾವೇರಿ ಉಪ ವಿಭಾಗಾಧಿಕಾರಿ ಡಾ.ದಿಲೀಷ್ ಶಶಿ ಅವರು ಮಸೀದಿ ಮತ್ತು ಮೊಹಲ್ಲಾಗಳಲ್ಲಿ ತಂಪು ಪಾನೀಯ, ಗಂಜಿ ವಿತರಿಸುವಂತಿಲ್ಲ, ಉಪಾಹಾರ ಅಂಗಡಿಗಳನ್ನು ತೆರೆಯುವಂತಿಲ್ಲ ಎಂದು ತಿಳಿಸಿದ್ದಾರೆ.
ರಂಜಾನ್ ನಮಾಜ್ ಹೆಸರಿನಲ್ಲಿ ಗುಂಪು ಸೇರದೇ ಅಂತರ ಕಾಯ್ದುಕೊಂಡು ನಮಾಜ್ ಮಾಡಬೇಕು ಎಂದು ತಿಳಿಸಿರುವ ಡಾ.ದಿಲೀಷ್ ಶಶಿ ಹೊರಗೆ ಓಡಾಡುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಗುಂಪು ಗುಂಪಾಗಿ ಬಡವರಿಗೆ ಸಹಾಯ ಮಾಡುವ ಹೆಸರಲ್ಲಿ ಸೇರಬಾರದು. ಮನೆಯಲ್ಲಿಯೇ ರಂಜಾನ್ ಹಬ್ಬವನ್ನು ಆಚರಿಸಿ ಹಾಗೂ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ.
30 ದಿನ ಜೈಲಿನಲ್ಲಿದ್ದರೆ ಅಧಿಕಾರ ಗೋವಿಂದ -ಜೈಲಿನಿಂದ ಆಡಳಿತ ನಡೆಸುವ ಆಟಕ್ಕೆ ಬೀಳಲಿದೆ ಬ್ರೇಕ್:30 ದಿನ ಜೈಲಿನಲ್ಲಿದ್ದರೆ ಸಿಎಂ ಮತ್ತು ಪ್ರಧಾನಿ ಪಟ್ಟಕ್ಕೆ ಕುತ್ತು;ವಿರೋಧ ಪಕ್ಷಗಳ ನಿದ್ದೆಗೆಡಿಸಿದ ಕೇಂದ್ರದ ಹೊಸ ಪ್ಲಾನ್
ನವದೆಹಲಿ: ಭ್ರಷ್ಟಾಚಾರ ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿ ಜೈಲು ಪಾಲಾಗುವ ಉನ್ನತ ಹುದ್ದೆಯಲ್ಲಿರುವವರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಯಾವುದೇ ಸಚಿವರು, ಮುಖ್ಯಮಂತ್ರಿ ಅಥವಾ...








