ತಮಿಳುನಾಡು ಜನರಿಗೆ ‘ಸ್ಟಾಲಿನ್ ಬಂಪರ್ ಗಿಫ್ಟ್’ ಗಳ ಸರಮಾಲೆ
ಚೆನ್ನೈ : ತಮಿಳುನಾಡು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ಎಂ.ಕೆ.ಸ್ಟಾಲಿನ್ ರಾಜ್ಯದ ಜನರಿಗೆ ಬಂಪರ್ ಗಿಫ್ಟ್ ಗಳನ್ನ ನೀಡಿದ್ದಾರೆ.
ಪ್ರಮಾಣವಚನ ಸ್ವೀಕರಿಸಿ ನೇರವಾಗಿ ಫೋರ್ಟ್ ಸೇಂಟ್ ಜಾರ್ಜ್‍ನ ಸಚಿವಾಲಯದಲ್ಲಿರುವ ತಮ್ಮ ಕಚೇರಿಯಿಂದ ಐದು ನಿರ್ಣಾಯಕ ಕಡತಗಳಿಗೆ ಸಹಿ ಹಾಕಿದರು.
ಕೊರೊನಾ ಚಿಕಿತ್ಸೆಯನ್ನು ಮುಖ್ಯಮಂತ್ರಿಗಳ ಆರೋಗ್ಯ ವಿಮಾ ಯೋಜನೆಯಡಿ ನೀಡುವುದು, ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ಎಲ್ಲಾ ಚಿಕಿತ್ಸಾ ವೆಚ್ಚಗಳನ್ನು ಸರ್ಕಾರವು ಮರುಪಾವತಿ ಮಾಡುವುದು, ರಾಜ್ಯಾದ್ಯಂತ ಮಹಿಳೆಯರಿಗೆ ಸರ್ಕಾರಿ ಸಿಟಿ ಬಸ್‍ಗಳಲ್ಲಿ (ಸಾಮಾನ್ಯ ಸೇವೆ) ಉಚಿತ ಪ್ರಯಾಣವನ್ನು ಘೋಷಿಸಿದ್ದಾರೆ.
ಅಲ್ಲದೆ ಪ್ರತಿ ಪಡಿತರ ಚೀಟಿದಾರರಿಗೆ 4,000 ರೂ.ಗಳ ಕೋವಿಡ್ ಪರಿಹಾರ ವಿತರಣೆ. ಕೊರೊನಾ ಸಾಂಕ್ರಾಮಿಕ ಪರಿಹಾರವಾಗಿ ಮೊದಲ ಕಂತು 2,000 ರೂ. ಮೇ ತಿಂಗಳಲ್ಲಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.










