ರಾಜ್ಯದಲ್ಲಿ ಮೇ.10 ರಿಂದ ಮೇ.24 ರವರೆಗೆ ಸಂಪೂರ್ಣ ಲಾಕ್ ಡೌನ್ lock down
ಬೆಂಗಳೂರು : ಕೊರೊನಾ ಕಫ್ರ್ಯೂ ವಿಫಲವಾದ ಹಿನ್ನೆಲೆಯಲ್ಲಿ ಕೊರೊನಾ ಕಂಟ್ರೋಲ್ ಗೆ ರಾಜ್ಯಾದ್ಯಂತ ಮೇ.10ರಿಂದ ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಿಎಸ್ ಯಡಿಯೂರಪ್ಪ, ಕೊರೊನಾ ಕಂಟ್ರೋಲ್ ಮಾಡುವ ಉದ್ದೇಶದಿಂದ ರಾಜ್ಯಾದ್ಯಂತ ಮೇ.10ರಿಂದ ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲಾಗುವುದು.

ಲಾಕ್ ಡೌನ್ ಜಾರಿ ಬಗ್ಗೆ ಬೆಳಿಗ್ಗೆ ಸುಮಾರು 2 ಗಂಟೆ ಕಾಲ ನಮ್ಮ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿಗಳ ಜೊತೆಗೆ ಚರ್ಚಿಸಲಾಯಿತು. ಈ ವೇಳೆ ಲಾಕ್ ಡೌನ್ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಾಜ್ಯದಲ್ಲಿ ಕೊರೊನಾ ಅಲೆ ಅತ್ಯಂತ ಪರಿಣಾಮವಾಗಿದೆ, ಇದನ್ನು ನಿಯಂತ್ರಿಸಲು ವಿಧಿಸಿದ್ದ ಕೊರೋನಾ ಕಪ್ರ್ಯೂ ಹೆಚ್ಚು ಪರಿಣಾಮಕಾರಿ ಆಗಿಲ್ಲ.
ಹೀಗಾಗಿ ದಿನಾಂಕ 10-05-2021ರ ಬೆಳಿಗ್ಗೆ 6 ಗಂಟೆಯವರೆ 24-05-2021ರವರೆಗೆ ಬೆಳಿಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗುತ್ತಿದೆ. ಈ ಅವಧಿಯಲ್ಲಿ ಅಂಗಡಿ, ಬಾರ್, ಹೋಟೆಲ್, ಪಬ್ ನಿಬರ್ಂಧಿಸಲಾಗಿದೆ ಎಂದರು.








