ರಾಮನಗರ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅವರು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಿಡದಿಯ ಕೇತಗಾನಹಳ್ಳಿ ಬಳಿ ಇರುವ ಫಾರ್ಮ್ ಹೌಸ್ ನಲ್ಲಿ ನಿಖಿಲ್-ರೇವತಿ ಸರಳ ವಿವಾಹ ನಡೆದಿದ್ದು, ಇಂದು ಬೆಳಗ್ಗೆ 9.30ಕ್ಕೆ ಶುಭಮುಹೂರ್ತದಲ್ಲಿ ಧಾರೆ ಕಾರ್ಯಕ್ರಮಗಳು ನಡೆದವು.
ಈ ಮೊದಲು ರಾಮನಗರದ ಜಾನಪದಲೋಕದ ಪಕ್ಕದಲ್ಲಿ ಮದುವೆ ಕಾರ್ಯ ನಡೆಸಲು ನಿರ್ಧರಿಸಲಾಗಿತ್ತು. ಆದ್ರೆ ಕೊರೊನಾದಿಂದಾಗಿ ಮದುವೆ ಕಾರ್ಯಕ್ರಮ ಬೆಂಗಳೂರಿಗೆ ಶಿಫ್ಟ್ ಆಗಿತ್ತು. ಬೆಂಗಳೂರು ಕೊರೊನಾದಿಂದಾಗಿ ರೆಡ್ ಜೋನ್ ನಲ್ಲಿರುವ ಕಾರಣ ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿ ಬಳಿ ಇರುವ ಫಾರ್ಮ್ ಹೌಸ್ ನಲ್ಲಿ ನಿಖಿಲ್ ರೇವತಿ ಸರಳ ವಿವಾಹ ನಡೆಯಿತು.
ಬೆಳಗ್ಗೆ 9.45ಶುಭಮುಹೂರ್ತದಲ್ಲಿ ರೇವತಿಗೆ ನಿಖಿಲ್ ಮಾಂಗಲ್ಯ ಧಾರಣೆ ಮಾಡಿದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ನಿಖಿಲ್ ಕುಟುಂಬದವರು ಹಾಗೂ ರೇವತಿ ಕುಟುಂಬದವರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು.








