BIGGBOSS 8 – ದಿವ್ಯಾ ನೆನಪಿನಲ್ಲಿ ಪದೇ ಪದೇ ಕಣ್ಣೀರಿಟ್ಟ ಅರವಿಂದ್
ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಪಕ್ಷಿಗಳಂತೆ ಸದಾ ಒಟ್ಟಾಗಿ ಇರುತ್ತಿದ್ದ ಜೋಡಿ ಅಂದ್ರೆ ಅದು ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರದ್ದು.. ಈ ಜೋಡಿ ನಡುವಿನ ಕೆಮಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಅಲ್ಲದೇ ಈ ಜೋಡಿಯ ಹೆಸರಲ್ಲಿ ಹ್ಯಾಷ್ ಟ್ಯಾಗ್ ಫ್ಯಾನ್ ಪೇಜ್ ಗಳನ್ನೇ ಆರಂಭಿಸಿದ್ಧಾರೆ. #arviya ಟ್ರೆಂಡಿಂಗ್ ನಲ್ಲಿದೆ.
ಆದ್ರೆ ಇತ್ತೀಚೆಗೆ ದಿವ್ಯಾ ಉರುಡುಗ ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ಇದ್ರಿಂದಾಗಿ ಪ್ರೇಕ್ಷಕರು ಬೇಸರಗೊಂಡಿದ್ದಾರೆ. ಮನೆ ಸದಸ್ಯರು ಸಾಕ್ ಆಗಿದ್ದು, ಬೇಜಾರಾಗಿದ್ದಾರೆ. ಆದ್ರೆ ಇವರೆಲ್ಲರಿಗಿಂತ ಹೆಚ್ಚು ದೂಃಖ ಆಗಿರುವುದು ಅರವಿಂದ್ ಗೆ.. ಅರವಿಂದ್ ಪದೇ ಪದೇ ದಿವ್ಯಾರನ್ನ ನೆನೆದು ಕಣ್ಣೀರು ಹಾಕುತ್ತಿರುವುದು ಕಂಡುಬರುತ್ತಿದೆ. 
ದಿವ್ಯಾ ಬಿಗ್‍ಬಾಸ್ ಮನೆಯಿಂದ ಆಚೆ ಹೋದ ದಿನದಿಂದಲೂ ಅರವಿಂದ್, ಅಷ್ಟೇನೂ ಆ್ಯಕ್ಟೀವ್ ಆಗಿಲ್ಲ. ಒಬ್ಬಂಟಿಯಾಗಿ ಕುಳಿತುಕೊಂಡೇ ಹೆಚ್ಚು ಕಾಲ ಕಳೆಯುತ್ತಾರೆ.. ಗಾರ್ಡನ್ ಏರಿಯಾದಲ್ಲಿ ಒಬ್ಬರೆ ಕುಳಿತಿರುತ್ತಾರೆ. ಆಗ ಮಂಜು ಅರವಿಂದ್ ಅವರಿಗೆ ಏನೋ ಮಾಡಲು ಸಾಧ್ಯವಿಲ್ಲ. ನಾವು ಹೊಂದಿಕೊಳ್ಳಲೇ ಬೇಕು ನನಗೂ ಅವಳ ನೆನೆಪು ಕಾಡುತ್ತಿದೆ ಎಂದು ಅರವಿಂದ್‍ಗೆ ಸಮಾಧಾನ ಮಾಡಿದ್ದಾರೆ. ಆಗ ಅರವಿಂದ್ ಅವರು ಕಣ್ಣೀರಿಟ್ಟಿದ್ದು ಕಂಡುಬಂದಿದೆ.
ಅರವಿಂದ್, ನಿಧಿ, ವೈಷ್ಣವಿ, ಮಂಜು ಮನೆಯಲ್ಲಿ ಒಂದು ಕಡೆ ಕುಳಿತು ಮಾತನಾಡುತ್ತಾ ಇದ್ದರು. ಆಗ ಅರವಿಂದ್ ಮಾತನಾಡುತ್ತಾ ಹಾಗೇ ನಿದ್ದೆಗೆ ಹೋಗಿದ್ದಾರೆ. ಆಗ ಬಿಗ್‍ಬಾಸ್ ಎದ್ದೇಳು ಮಂಜುನಾಥ ಎದ್ದೇಳು ಮಂಜುನಾಥ.. ಎಂದು ಸಾಂಗ್ ಹಾಕಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ಇದೆ ಮೊದಲ ಬಾರಿಗೆ ಅರವಿಂದ್ ಹಗಲು ನಿದ್ದೆ ಮಾಡಿ ಬಿಗ್‍ಬಾಸ್ ಮನೆಯ ನಿಯಮವನ್ನು ಬ್ರೇಕ್ ಮಾಡಿದ್ದಾರೆ ಎಂದು ಮನೆ ಮಂದಿ ಹೇಳಿದ್ದಾರೆ. ಅರವಿಂದ್ ಮಾತ್ರ ಕಿರು ನಗೆ ಬೀರುತ್ತಾ ಎದ್ದು ಕುಳಿತ್ತಿದ್ದಾರೆ.








