ಕೊರೋನಾ ಲಸಿಕೆ ಪಡೆದ ನಂತರ ಕೊರೋನಾ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡುವುದು ಹೇಗೆ?
ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ಬಿಕ್ಕಟ್ಟು ಉತ್ತುಂಗದಲ್ಲಿದೆ. ಕೊರೋನಾ ಸಾಂಕ್ರಾಮಿಕದಿಂದ ಇದುವರೆಗೆ 1.24 ಕೋಟಿ ಜನರು ಸೋಂಕಿಗೆ ಒಳಗಾಗಿದ್ದಾರೆ. ಕೊರೋನಾದಿಂದ ಬದುಕುಳಿಯುವ ಏಕೈಕ ರಕ್ಷಣಾತ್ಮಕ ಆಯುಧವೆಂದರೆ ಲಸಿಕೆ. ದೇಶಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ನಲ್ಲಿ ಈವರೆಗೆ 16,48,76,248 ಕೋಟಿ ಡೋಸ್ಗಳನ್ನು ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಗುರುವಾರ ರಾತ್ರಿ 8 ಗಂಟೆಯವರೆಗೆ, 18-44 ವಯಸ್ಸಿನ 2.62 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಲಸಿಕೆ ಡೋಸ್ ಅನ್ನು ನೀಡಲಾಗಿದೆ. ಮೇ1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೋನಾ ಲಸಿಕೆ ನೀಡಲಾಗುತ್ತಿದೆ. ಇದಕ್ಕಾಗಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಕೊರೋನಾ ಲಸಿಕೆ ಪಡೆದುಕೊಂಡ ನಂತರ, ಅದರ ಪ್ರಮಾಣಪತ್ರವನ್ನು ಪಡೆಯುವುದು ಸಹ ಬಹಳ ಮುಖ್ಯ.

ಕೊರೋನಾ ಲಸಿಕೆ ಪಡೆದ ನಂತರ, ಕೊರೋನಾ ಪ್ರಮಾಣಪತ್ರವನ್ನು ಹೇಗೆ ಡೌನ್ಲೋಡ್ ಮಾಡುವುದು
ನೀವು ಕೋವಿಡ್ -19 ಲಸಿಕೆಯ ಮೊದಲ ಡೋಸ್ ಅಥವಾ ಎರಡೂ ಡೋಸ್ ಪಡೆದಿದ್ದರೆ ಕೋವಿಡ್ -19 ಲಸಿಕೆ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
ಮೊದಲನೆಯದಾಗಿ ಕೋವಿನ್ ಪೋರ್ಟಲ್ಗೆ ಭೇಟಿ ನೀಡಿ, ಫಲಾನುಭವಿ ಉಲ್ಲೇಖ ID ಯನ್ನು ನಮೂದಿಸಿ. ನಂತರ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಲು, ಸರ್ಚ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಆರೋಗ್ಯಾ ಸೇತು ಆ್ಯಪ್ ಮೂಲಕ ಕೋವಿಡ್ -19 ಲಸಿಕೆ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಲು, ಮೊದಲು ಮಾಡಬೇಕಾಗಿರುವುದು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಅಥವಾ ಐಫೋನ್ನಲ್ಲಿ ಆರೋಗ್ಯಾ ಸೇತು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವುದು.
ನೀವು ಈಗಾಗಲೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ್ದರೆ, ಅದನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಬಹುದು ಮತ್ತು ಅದರ ನಂತರ ನೀವು ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ.
ಆರೋಗ್ಯಾ ಸೇತು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡ ನಂತರ ಹೋಮ್ ಸ್ಕ್ರೀನ್ನಲ್ಲಿರುವ ಕೋವಿನ್ ಟ್ಯಾಬ್ ಕ್ಲಿಕ್ ಮಾಡಿ.
ಅದರ ನಂತರ ‘ವ್ಯಾಕ್ಸಿನೇಷನ್ ಸರ್ಟಿಫಿಕೇಟ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಂತರ ‘ಪ್ರಮಾಣಪತ್ರ ಪಡೆಯಿರಿ’ ಬಟನ್ ಕ್ಲಿಕ್ ಮಾಡಿ.
ಕೋವಿಡ್ -19 ಲಸಿಕೆ ಪ್ರಮಾಣಪತ್ರವನ್ನು ನಿಮ್ಮ ಫೋನ್ನಲ್ಲಿ ಡೌನ್ಲೋಡ್ ಮಾಡಲಾಗುತ್ತದೆ.
ನೀವು ಲಸಿಕೆ ತೆಗೆದುಕೊಂಡಿದ್ದೀರಿ ಎಂದು ಪ್ರಮಾಣಪತ್ರವು ಸಾಬೀತುಪಡಿಸುತ್ತದೆ. ಇದರೊಂದಿಗೆ, ಕೋವಿಡ್ -19 ವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆಯೂ ತುಂಬಾ ಕಡಿಮೆ ಎಂಬುದಕ್ಕೆ ಇದು ಪುರಾವೆಯಾಗಿದೆ. ಕೊರೋನವೈರಸ್ ನ ಪರಿಣಾಮವು ಕಡಿಮೆಯಾದ ಬಳಿಕ ನೀವು ಸುಲಭವಾಗಿ ಬೇರೆ ರಾಜ್ಯ ಅಥವಾ ದೇಶಕ್ಕೆ ಪ್ರಯಾಣಿಸಬಹುದು ಮತ್ತು ನಿಮಗೆ ಇದು ಅಗತ್ಯವಾಗಿರುತ್ತದೆ.

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ… ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ
https://twitter.com/SaakshaTv/status/1390506933489180675?s=19
https://twitter.com/SaakshaTv/status/1390494846192922625?s=19
ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಸ್ವಾಗತ ಕೋರಿದ ದೇಶಿ ಅಪ್ಲಿಕೇಶನ್ ಕೂ#Desiapp #koo #actresskangana https://t.co/f2GEqhxnhR
— Saaksha TV (@SaakshaTv) May 6, 2021
https://twitter.com/SaakshaTv/status/1390132456125128706?s=19
#download #coronacertificate #coronavaccine








