ಚಾಮರಾಜನಗರದಲ್ಲಿ 14 ತಾಸುಗಳಲ್ಲಿ 14 ಮಂದಿ ಸೋಂಕಿತರು ಸಾವು
ಚಾಮರಾಜನಗರ : ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಮುಂದುವರಿದಿದ್ದು, ಕಳೆದ 14 ಗಂಟೆಗಳಲ್ಲಿ 14 ಮಂದಿ ಸೋಂಕಿತರು ಕೊನೆಯುಸಿರೆಳೆದಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ಸಂಜೆ 6 ಯಿಂದ ಇಂದು ಬೆಳಗ್ಗೆ 9 ರವರೆಗೆ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ.
ಇವರಲ್ಲಿ 8 ಮಂದಿ ಸೋಂಕಿತರು ಉಸಿರಾಟ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇತ್ತೀಚೆಗೆ ಈ ಆಸ್ಪತ್ರೆಯಲ್ಲಿ 24 ಮಂದಿ ರೋಗಿಗಳು ಅಸುನೀಗಿದ್ದರು.
ಇದಾದ ಬಳಿಕ ಮತ್ತೆ 10 ರೋಗಿಗಳು ಸಾವನ್ನಪ್ಪಿದ್ದರೆ ಮೊನ್ನೆ ಕೂಡ 9 ರೋಗಿಗಳು ಮೃತಪಟ್ಟಿದ್ದರು.










